:
ತಳಿಗಳು
1. ಪೂಸಾ ಜ್ಯೋತಿ: ಇದು ದೊಡ್ಡ ಗಾತ್ರದ ದಪ್ಪವಾದ ಎಳೆಯ ರಸಭರಿತ ಎಲೆಗಳನ್ನು ಬಿಡುವ ತಳಿ. ಇದು ಪ್ರತಿ ಹೆಕ್ಟೇರಿಗೆ 49 ಟನ್ ಎಲೆಯ ಇಳುವರಿಯನ್ನು 6-8 ಕಟಾವ್ರಗಳಲ್ಲಿ ಕೊಡಬಲ್ಲದು.
2. ಆಲ್ ಗ್ರೀನ್: ಇದು ಒಂದೇ ತರಹದ ಅಚ್ಚ ಹಸಿರಿನ ಮೃದು ಎಲೆಗಳನ್ನು ಬಿಡುತ್ತದೆ. ಇದರ ಎಲೆಗಳನ್ನು 15-20 ದಿವಸಗಳ ಅಂತರದಲ್ಲಿ 6-7 ಸಲ ಕಟಾವ್ರ ಮಾಡಬಹುದು. ಒಟ್ಟು ಪ್ರತಿ ಹೆಕ್ಟೇರಿಗೆ 125 ಟನ್ ಇಳುವರಿಯನ್ನು ಕೊಡಬಲ್ಲದು.
3. ಅರ್ಕಾ ಅನುಪಮ: ಇದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಇದು ಮಧ್ಯಮ ಗಾತ್ರದ ಹಾಗೂ ದಪ್ಪದ ಎಲೆಗಳನ್ನು ಬಿಡುತ್ತದೆ. ಇದು ಪ್ರತಿ ಹೆಕ್ಟೇರಿಗೆ 40 ಟನ್ ಎಲೆಯ ಇಳುವರಿಯನ್ನು 4 ಕಟಾವ್ರಗಳಲ್ಲಿ 90 ದಿವಸದ ಅವದಿಯಲ್ಲಿ ಕೊಡಬಲ್ಲದು.