:
ಮಿಶ್ರ ಹಾಗೂ ಅಂತರ ಬೆಳೆಯಾಗಿ ಸೋಯಾ ಅವರೆ
ಅ. ತೊಗರಿ + ಸೋಯಾಅವರೆ (2:4)
ನಾಲ್ಕು ಸಾಲು ಸೋಯಾಅವರೆ ಮತ್ತು ಎರಡು ಸಾಲು ತೊಗರಿಯನ್ನು 30 ಸೆಂ.ಮೀ. ಅಂತರದ ಸಾಲಿನಲ್ಲಿ ಬೆಳೆಯುವ್ರದು ಹೆಚ್ಚು ಲಾಭದಾಯಕ. ಸೋಯಾಅವರೆಯನ್ನು 30 ಸೆಂ.ಮೀ. ಅಂತರದ ಮೂರು ತಾಳಿನ ಕೂರಿಗೆಯಿಂದ ಕೊನೆಯ ಸಾಲನ್ನು ಹುಸಿ ಮಾಡಿ ಬಿತ್ತಬೇಕು. ಹುಸಿ ಮಾಡಿದ ಸಾಲಿನಲ್ಲಿ ಎಳಸೆಡ್ಡೆಯಿಂದ ತೊಗರಿ ಬಿತ್ತನೆ ಕೈಗೊಳ್ಳಬೇಕು.
ಆ. ಹೈಬ್ರಿಡ್ ಹತ್ತಿ ಸೋಯಾ ಅವರೆ (1:2)
ಎರಡು ಸಾಲು ಸೋಯಾ ಅವರೆ ಮತ್ತು ಒಂದು ಸಾಲು ಹೈಬ್ರಿಡ್ ಹತ್ತಿ ಬೆಳೆಯುವ್ರದು ಲಾಭದಾಯಕ. ಸೋಯಾ ಅವರೆಯನ್ನು 40 ಸೆಂ.ಮೀ. ಅಂತರದ ಮೂರು ತಾಲಿನ ಕೂರಿಗೆಯಿಂದ ನಡುವಿನ ತಾಲು ಹುಸಿ ಮಾಡಿ ಬಿತ್ತಬೇಕು. ಹುಸಿಬಿಟ್ಟು ಸಾಲಿನಲ್ಲಿ ಹೈಬ್ರಿಡ್ ಹತ್ತಿಯನ್ನು 60 ಸೆಂ.ಮೀ. ಅಂತರದಲ್ಲಿ ಕೈಗಾಳು ಹಾಕಬೇಕು.
ಇ. ಗೋವಿನಜೋ ಸೋಯಾಅವರೆ (1:2)
ಒಂದು ಸಾಲು ಗೋವಿನಜೋಳದ ಜೊತೆ ಎರಡು ಸಾಲು ಸೋಯಾಅವರೆಯನ್ನು ಬೆಳೆಯುವ್ರದು ಲಾಭದಾಯಕ. ಸೋಯಾಅವರೆಯನ್ನು 30 ಸೆಂ.ಮೀ. ಅಂತರದ ಮೂರು ತಾಳಿನ ಕೂರಿಗೆಯಿಂದ ನಡುವಿನ ಸಾಲು ಹುಸಿಬಿಟ್ಟು ಬಿತ್ತನೆ ಮಾಡಬೇಕು. ಹುಸಿಬಿಟ್ಟು ಸಾಲಿನಲ್ಲಿ ಗೋವಿನಜೋಳವನ್ನು 20 ಸೆಂ.ಮೀ. ಗೆ ಅಂತರದಲ್ಲಿ ಕೈಗಾಳು ಹಾಕಬೇಕು.
ಈ. ತಂಬಾಕು ಸೋಯಾಅವರೆ (1:2)
ಸೋಯಾಅವರೆಯನ್ನು ಮುಂಗಾರು ಹಂಗಾಮು ಪ್ರಾರಂಭವಾದ ಕೂಡಲೇ ಬಿತ್ತಬೇಕು. 30 ಸೆಂ.ಮೀ. ಅಂತರದ ಮೂರು ತಾಳಿನ ಕೂರಿಗೆಯಿಂದ ನಡುವಿನ ಸಾಲು ಹುಸಿ ಮಾಡಿ ಬಿತ್ತನೆಮಾಡಬೇಕು. ಹುಸಿಬಿಟ್ಟ ಸಾಲಿನಲ್ಲಿ ಅಗಸ್ಟ್ ತಿಂಗಳಲ್ಲಿ ತಂಬಾಕು ಸಸಿಗಳನ್ನು 60 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.
ಉ. ರಾಗಿಯೊಡನೆ ಮಿಶ್ರ ಬೆಳೆ
45 ಸೆಂ.ಮೀ. ಅಂತರವಿರುವ ಎರಡು ರಾಗಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾಅವರೆ ಬೆಳೆಯುವ್ರದರಿಂದ ಹೆಕ್ಟೇರಿಗೆ ಸುಮಾರು 35 ಕ್ವಿಂಟಾಲ್ ರಾಗಿ ಮತ್ತು 5 ಕ್ವಿಂಟಾಲ್ ಸೋಯಾಅವರೆ ಇಳುವರಿ ಪಡೆಯಬಹುದು.
ಊ. ಕಬ್ಬಿನೊಡನೆ ಮಿಶ್ರ ಬೆಳೆ
ಕಬ್ಬನ್ನು ನಾಟಿ ಮಾಡಿದ ಸಾಲಿನ ಒಂದು ಬದಿಯ ಇಳಿಜಾರಿನಲ್ಲಿ ರೈಜೋಬಿಯಂ ಅಣುಜೀವಿಗಳಿಂದ ಉಪಚರಿಸಿದ ಸೋಯಾಅವರೆ ಬೀಜವನ್ನು 10 ಸೆಂ.ಮೀ. ಅಂತರದಲ್ಲಿ ಕೈಗಾಳು ಹಾಕಬೇಕು. ಕಬ್ಬು ನಾಟಿ ಮಾಡಿದ ದಿನ ಅಥವಾ ಮರುದಿನ ಸೋಯಾಅವರೆ ಬಿತ್ತನೆ ಕೈಗೊಳ್ಳಬಹುದು. ಒಂದು ಹೆಕ್ಟೇರ್ ಪ್ರದೇಶಕ್ಕೆ 25 ಕಿ.ಗ್ರಾಂ ಬೀಜ ಬೇಕಾಗುವ್ರದು ಈ ಪದ್ಧತಿಯಿಂದ ಕಬ್ಬಿನ ಇಳುವರಿ ಜೊತೆಗೆ ಪ್ರತಿ ಹೆಕ್ಟೇರಿಗೆ 8-10 ಕ್ವಿಂಟಲ್ ಸೋಯಾಅವರೆ ಇಳುವರಿಯನ್ನು ಪಡೆಯಬಹುದು.