:
ಅಂತರ ಮತ್ತು ಮಿಶ್ರ ಬೆಳೆಗಳು
1. ವಾರ್ಷಿಕ ಬೆಳೆಗಳು: ಪ್ರದೇಶಕ್ಕನುಗುಣವಾಗಿ ದ್ವಿದಳ ಧಾನ್ಯಗಳು, ತರಕಾರಿ ಬೆಳೆಗಳು ಹಾಗೂ ಅರಿಶಿನ, ಶುಂಠಿ ಬೆಳೆಗಳನ್ನು ಪ್ರಾರಂಭದ ಹತ್ತು ವರ್ಷಗಳವರೆಗೆ ಬೆಳೆಯಬಹುದು.
2. ಬಹುವಾರ್ಷಿಕ ಬೆಳೆಗಳು: ಬಾಳೆ, ಪಪಾಯ, ಅನಾನಸ್, ಹಿಪ್ಪುನೇರಳೆ ಮುಂತಾದ ಬೆಳೆಗಳನ್ನು ಅಂತರ ಬೆಳೆಯನ್ನಾಗಿ ಹತ್ತು ವರ್ಷಗಳವರೆಗೆ ಬೆಳೆಯಬಹುದು.
3. ಮಿಶ್ರ ಬೆಳೆಗಳು: ನಾಟಿ ಮಾಡಿದ 15 ವರ್ಷಗಳ ನಂತರ ಕೋಕೊ, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ, ಲವಂಗ, ಸರ್ವ ಸಂಬಾರ, ವೆನಿಲ್ಲಾ, ನುಗ್ಗೆ, ಕರಿಬೇವು, ಪಚೋಲಿ, ಹಿಪ್ಪಲಿ ಮತ್ತು ಕಾಫಿ ಬೆಳೆಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯಬಹುದು.
ವಿಶೇಷ ಸೂಚನೆ:
1. ತೆಂಗಿನ ಮರದಿಂದ 1.5-2 ಮೀ. ಸುತ್ತಳತೆಯಲ್ಲಿ ಯಾವುದೇ ಅಂತರ ಅಥವಾ ಆಳವಾಗಿ ಬೇರು ಬಿಡುವ ಮಿಶ್ರ ಬೆಳೆಗಳನ್ನು ಬೆಳೆಯಬಾರದು.
2. ಪ್ರಧಾನ ಬೆಳೆಯಾದ ತೆಂಗಿನೊಂದಿಗೆ ಅಂತರ ಮತ್ತು ಮಿಶ್ರ ಬೆಳೆಗಳಿಗಿರುವ ಸುಧಾರಿತ ಬೇಸಾಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
3. ತೆಂಗಿನ ಮಧ್ಯ ಮಿಶ್ರ ಬೆಳೆಯಾಗಿ ಸಪೋಟ, ಮಾವು, ಹುಣಸೆ ಇಂತಹ ಬಹು ವಾರ್ಷಿಕ ಬೆಳೆಗಳನ್ನು ಕೃಷಿ ಮಾಡುವುದು ಸೂಕ್ತವಲ್ಲ.
ತೆಂಗಿನ ಹೀಚು ಉದುರುವಿಕೆ: ತೇವಾಂಶ ಹಾಗೂ ಪೋಷಕಾಂಶಗಳ ಕೊರತೆ ಇದ್ದು, ಸರಿಯಾಗಿ ಪರಾಗಸ್ಪರ್ಶವಾಗದೇ ಇದ್ದಾಗ ಹೀಚು ಉದುರುವಿಕೆ ಕಂಡುಬರುತ್ತದೆ.