:
ತಳಿಗಳು
1.ಪೂಸಾ ಸವಾನಿ: ಈ ತಳಿಯನ್ನು ಎಲ್ಲ ವಲಯಗಳಿಗೆ ಶಿಫಾರಸ್ಸು ಮಾಡಲಾಗಿದ್ದು ಹಳದಿ ನಂಜುರೋಗಕ್ಕೆ ಸ್ವಲ್ಪಮಟ್ಟಿಗೆ ನಿರೋಧಕ ಶಕ್ತಿ ಹೊಂದಿದೆ.
2.ಅರ್ಕಾ ಅಭಯ್: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿದ್ದು, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಗುಣ ಹಾಗೂ ಅಡಿಗೆ ಗುಣಗಳನ್ನು ಹೊಂದಿವೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 120-130 ದಿವಸಗಳು. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು.
3.ಅರ್ರ್ಕಾ ಅನಾಮಿಕಾ: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳೂ ಎತ್ತರವಾಗಿ ಬೆಳೆಯುತ್ತವೆ ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿ, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಹಾಗೂ ಅಡಿಗೆ ಗುಣಗಳನ್ನು ಹೊಂದಿರುತ್ತವೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 130-135 ದಿವಸಗಳು. ಒಂದು ಹೆಕ್ಟೇರಿಗೆ 20 ಟನ್ ಇಳುವರಿ ಬರುತ್ತದೆ.
4.ವೈಟ್ ವೆಲ್ವೆಟ್ (ಹಾಲು ಬೆಂಡೆ): ಇದು ಸ್ಥಳೀಯ ತಳಿಯಾಗಿದ್ದು, ರಾಜ್ಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.