ಅಂತರ ಬೇಸಾಯ
3-4 ಬಾರಿ ಕಳೆ ತೆಗೆದು, ಅಂತರ ಬೇಸಾಯ ಮಾಡಬೇಕು. ಸುಳಿ ತೆಗೆಯುತ್ತಿರುವವರೆಗೂ ಮಣ್ಣಾಗಿರುವ ತಳಭಾಗದ ಎಲೆಗಳನ್ನು ತೆಗೆದು ಹಾಕಿ, ಬುಡದಿಂದ 10-14 ಸೆಂ.ಮೀ. ವರೆಗೆ ಇರುವ ಎಲೆಗಳನ್ನು ಮಾತ್ರ ತೆಗೆಯಬೇಕು. ಸುಳಿಯನ್ನು 4-6 ವಾರಗಳ ನಂತರ ಅಂದರೆ 16-18 ಎಲೆಗಳು ಇರುವಾಗ ತೆಗೆಯಬೇಕು. ಸುಳಿಯನ್ನು ತೆಗೆದ ನಂತರ ಪಕ್ಕದಲ್ಲಿ ಬರುವ ಕವಲುಗಳನ್ನು ನಿರಂತರವಾಗಿ ತೆಗೆಯಬೇಕು.
ಸರದಿ ಮಿಶ್ರ ಬೆಳೆಗಳು
ಉಳ್ಳಾಗಡ್ಡಿ + ತಂಬಾಕು
ಶೇಂಗಾ + ತಂಬಾಕು
ಸೋಯಾಅವರೆ + ತಂಬಾಕು
ತಂಬಾಕು + ಕಬ್ಬು
ದ್ವಿ ಬೆಳೆ ಪದ್ಧತಿಗಳು
ಮುಂಗಾರು ಶೇಂಗಾ ನಂತರ ತಂಬಾಕು
ಮುಂಗಾರು ಸೋಯಾಅವರೆ ನಂತರ ತಂಬಾಕು
ಮುಂಗಾರು ಹೆಸರು ನಂತರ ತಂಬಾಕು
ಮೂರು ಬೆಳೆ ಪದ್ಧತಿಗಳು (ನೀರಾವರಿ)
ಮುಂಗಾರು ಶೇಂಗಾ ನಂತರ ತಂಬಾಕು : ಬೇಸಿಗೆ ಶೇಂಗಾ
ಮುಂಗಾರು ಸೋಯಾಅವರೆ ನಂತರ ತಂಬಾಕು ಗೋವಿ ಜೋಳ
ತಂಬಾಕು ಬದಲಿ ಬೆಳೆ ಪದ್ಧತಿಗಳು
ಮುಂಗಾರು ಶೇಂಗಾ - ಹಿಂಗಾರಿ ಜೋಳ
ಮುಂಗಾರು ಸೋಯಾಅವರೆ - ಹಿಂಗಾರಿ ಜೋಳ
ತಂಬಾಕಿನ ಬದಲಾಗಿ ಮುಂಗಾರಿನಲ್ಲಿ ಸೋಯಾಅವರೆ/ಶೇಂಗಾ ಬೆಳೆದು ತದನಂತರ ಹಿಂಗಾರಿನಲ್ಲಿ ಜೋಳ ಬೆಳೆಯುವುದು ಹೆಚ್ಚು ಲಾಭದಾಯಕ.
ಖರ್ಚು ಇಲ್ಲದ ಬೇಸಾಯ ಕ್ರಮಗಳು
• ಆಯಾ ಪ್ರದೇಶಕ್ಕೆ ಶಿಫಾರಸ್ಸು ಮಾಡಿದ ತಳಿಗಳನ್ನೇ ಬಳಸಬೇಕು.
• ಆಗಸ್ಟ್ ತಿಂಗಳೊಳಗಾಗಿ ನಾಟಿ ಕೆಲಸ ಮುಗಿಸುವುದು ಉತ್ತಮ.
• ನಾಟಿಗೆ 2-3 ವಾರಗಳ ಮೊದಲೇ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಬೇಕು.
• ಬೆಳೆಯನ್ನು ರೋಗ ಬಾಧೆಯಿಂದ ರಕ್ಷಿಸಲು ಬೆಳೆ ಪರಿವರ್ತನೆ ಅವಶ್ಯ.
ಸೂಚನೆ
1. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಆಳವಾದ ಉಳುಮೆ ಮಾಡುವುದರಿಂದ ಬಂಬಾಕು ಕಳೆಯ ಬಾಧೆ ಕಡಿಮೆಮಾಡಬಹುದು.
2. ಹಸಿರು ಎಲೆ ಗೊಬ್ಬರ ಹಾಕುವುದರಿಂದ ಬಂಬಾಕು ಬಾಧೆಯನ್ನು ಕಡಿಮೆ ಮಾಡಬಹುದಲ್ಲದೇ, ಇಳುವರಿ ಹೆಚ್ಚಿಸಬಹುದು ತಂಬಾಕಿನ ಜೊತೆಗೆ ಈ ಕೆಳಗಿನ ಅಂತರ ಮತ್ತು ಮಿಶ್ರ ಬೆಳೆಗಳನ್ನು ಬೆಳೆಯಬಹುದು.