:
ತಳಿಗಳು
1.ಪೂಸಾ ರೂಬಿ: ಹಣ್ಣುಗಳು ಮಧ್ಯಮ ಗಾತ್ರದವಾಗಿದ್ದು ಕೆಂಪು ವರ್ಣವನ್ನು ಹೊಂದಿರುತ್ತವೆ. ಈ ತಳಿ ಸಾಧಾರಣ ಉತ್ತಮ ಇಳುವರಿ ಕೊಡುತ್ತದೆ. ಮಳೆಯಾಶ್ರಯದಲ್ಲಿ ಬೆಳೆಯಲು ಸೂಕ್ತ ತಳಿ.
2.ಎನ್.ಟಿ.ಡಿ.ಆರ್-1: ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಅಭಿವೃದ್ಧಿಪಡಿಸಿದ ಈ ತಳಿ ಜಂತು ಹುಳುವಿನ ಬಾಧೆ ತಡೆದುಕೊಳ್ಳುವ ಶಕ್ತಿ ಹೊಂದಿದೆ ಹಾಗೂ ಉತ್ತಮ ಇಳುವರಿಯನ್ನು ಕೊಡುತ್ತದೆ.
3.ಮೇಘಾ (ಎಲ್-15) : ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಎನ್.ಟಿ.ಡಿ.ಆರ್-1 ಮತ್ತು ಎ.ವಿ.ಆರ್.ಡಿ.ಸಿ. ತಳಿಗಳ ಸಂಕರಣದಿಂದ ಅಭಿವೃದ್ಧಿಪಡಿಸಲಾಗಿದೆ. ಹಣ್ಣುಗಳು ಮಧ್ಯಮ ಗಾತ್ರ, ದುಂಡನೆಯ ಆಕಾರಹೊಂದಿ, ಹೆಚ್ಚಿನ ಉಷ್ಣತೆಯಲ್ಲಿಯೂ ಕೂಡ ಕಾಯಿಕಚ್ಚುವ ಸಧ್ಯತೆಯನ್ನು ಹೊಂದಿರುತ್ತದೆ. ಪ್ರತಿ ಹೆಕ್ಟೇರಿಗೆ 25 ರಿಂದ 30 ಟನ್ ಇಳುವರಿ ಕೊಡುವ ಈ ತಳಿ, ಪೂಸಾ ರೂಬಿಗಿಂತ ಶೇ. 43 ರಷ್ಟು ಹೆಚ್ಚು ಇಳುವರಿ ಕೊಡುತ್ತದೆ. ಹಣ್ಣುಗಳನ್ನು ಕೊಯ್ಲು ಮಾಡಿದ 8 ರಿಂದ 10 ದಿನಗಳವರೆಗೆ ಕೆಡದಂತೆ ಇಡಬಹುದು.
4.ರೋಮಾ: ಇದು ಉತ್ತಮ ಇಳುವರಿ ಕೊಡುವ ತಳಿಯಾಗಿದ್ದು ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ.
5.ಅರ್ಕಾ ವಿಕಾಸ್: ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ. ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, 140 ದಿನಗಳಲ್ಲಿ ಬೆಳೆ ಮುಗಿಯುತ್ತದೆ. ಇದರ ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು (80-90 ಗ್ರಾಂ) ಕಡು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದನ್ನು ಮಳೆಯ ಆಶ್ರಯದಲ್ಲಿ ಹಾಗೂ ನೀರಾವರಿ ಪ್ರದೇಶಗಳಲ್ಲಿ ಬೆಳೆಯಬಹುದು. ಒಂದು ಹೆಕ್ಟೇರ್ನಿಂದ 35-40 ಟನ್ ಇಳುವರಿ ಪಡೆಯಬಹುದು.
6.ಅರ್ಕಾ ಸೌರಭ: ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ. ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, 140 ದಿನಗಳಲ್ಲಿ ಬೆಳೆ ಮುಗಿಯುತ್ತದೆ. ಇದರ ಹಣ್ಣುಗಳು ಮಧ್ಯಮ ಗಾತ್ರದವಾಗಿದ್ದು (70-80 ಗ್ರಾಂ) ಕಡು ಕೆಂಪು ಬಣ್ಣ ಹೊಂದಿರುತ್ತದೆ. ಮಾರುಕಟ್ಟೆಗೆ ಹಾಗು ಸಂಸ್ಕರಣೆ ಮಾಡಲು ಯೋಗ್ಯವಾದ ತಳಿ. ಇದು ಚಳಿಗಾಲಕ್ಕೆ ಸೂಕ್ತವಾದ ತಳಿ. ಒಂದು ಹೆಕ್ಟೇರಿಗೆ 30 ರಿಂದ 35 ಟನ್ ಇಳುವರಿ ಬರುತ್ತದೆ.
7.ಅರ್ಕಾ ಆಭಾ: ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, 140 ದಿನಗಳಲ್ಲಿ ಬೆಳೆ ಬಲಿಯುತ್ತದೆ. ಹಣ್ಣುಗಳು ಕಡು ಕೆಂಪು ಬಣ್ಣದಿಂದ ಕುಡಿದ್ದು, ಸುಮಾರು 75 ಗ್ರಾಂ. ತೂಕವಿರುತ್ತವೆ. ಇದು ದುಂಡಾಣು ಸೊರಗು ರೋಗವನ್ನು ನಿರೋಧಿಸುವ ಶಕ್ತಿಯನ್ನು ಹೊಂದಿದೆ. ಇದನ್ನು ಮಳೆಗಾಲ ಮತ್ತು ಚಳಿಗಾಲಗಳೆರಡಲ್ಲೂ ಬೆಳೆಯಬಹುದು. ಒಂದು ಹೆಕ್ಟೇರಿಗೆ 43 ಟನ್ ಇಳುವರಿ ಬರುತ್ತದೆ.
8.ಅರ್ಕಾ ಅಲೋಕ್: ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಬೆಳೆಯು 130 ದಿನಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು (120 ಗ್ರಾಂ) ಗಟ್ಟಿಯಾಗಿರುತ್ತವೆ. ಇದಕ್ಕೆ ದುಂಡಾಣು ಸೊರಗು ರೋಗವನ್ನು ನಿರೋಧಿಸುವ ಶಕ್ತಿ ಇದೆ. ಇದನ್ನು ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಬೆಳೆಯಬಹುದು. ಒಂದು ಹೆಕ್ಟೇರಿಗೆ 46 ಟನ್ ಇಳುವರಿ ಪಡೆಯಬಹುದು.
9.ಅರ್ಕಾ ಆಶಿಶ್: ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಬೆಳೆಯ ಅವಧಿ 130 ದಿನಗಳು. ಹಣ್ಣುಗಳು ಮೊಟ್ಟೆಯಾಕಾರದಲ್ಲಿದ್ದು, ಗಟ್ಟಿಯಾಗಿರುತ್ತವೆ ಮತ್ತು ಒಳ್ಳೆಯ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಹಣ್ಣುಗಳು ಒಂದೇ ಸಾರಿ ಕೊಯ್ಲಿಗೆ ಸಿದ್ಧವಾಗುತ್ತವೆ ಇದು ಸಂಸ್ಕರಣೆಗೆ ಸೂಕ್ತವಾದ ತಳಿ. ಇದಕ್ಕೆ ಬೂದಿ ರೋಗವನ್ನು ನಿರೋಧಿಸುವ ಶಕ್ತಿ ಇದೆ. ಹಣ್ಣುಗಳು ಬಿರುಕು ಬಿಡುವುದಿಲ್ಲ. ಇದು ಮಳೆಗಾಲ ಹಾಗೂ ಚಳಿಗಾಲಗಳೆರಡರಲ್ಲೂ ಬೆಳೆಯಲು ಸೂಕ್ತವಾಗಿದೆ. ಒಂದು ಹೆಕ್ಟೇರಿಗೆ 38 ಟನ್ ಇಳುವರಿ ಪಡೆಯಬಹುದು.
10.ಅರ್ಕಾ ಆಹುತಿ: ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಗಿಡಗಳು ಮಧ್ಯಮ ತರದ ಬೆಳವಣಿಗೆಯನ್ನು ಹೊಂದಿದ್ದು, ಬೆಳೆ 140 ದಿವಸಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಸ್ವಲ್ಪ ಉದ್ದವಾಗಿದ್ದು, ಕಡು ಕೆಂಪು ಬಣ್ಣವನ್ನು ಹೊಂದಿದ್ದು ಹೆಚ್ಚು ತಿರುಳಿನಿಂದ ಕೂಡಿರುತ್ತವೆ. ಇದು ಸಂಸ್ಕರಣೆಗೆ ಸೂಕ್ತವಾದ ತಳಿ. ಇದನ್ನು ಮಳೆಗಾಲ ಮತ್ತು ಚಳಿಗಾಲ ಎರಡರಲ್ಲೂ ಬೆಳೆಯಬಹುದು. ಒಂದು ಹೆಕ್ಟೇರಿಗೆ 42 ಟನ್ ಇಳುವರಿ ಪಡೆಯಬಹುದು.
11.ಅರ್ಕಾ ಮೇಘಾಲಿ : ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ. ಗಿಡಗಳು ಮಧ್ಯಮ ಬೆಳೆವಣಿಗೆಯನ್ನು ಹೊಂದಿದ್ದು, ಬೆಳೆ 125 ದಿನಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಮಧ್ಯಮ ಗಾತ್ರದವಾಗಿದ್ದು (65 ಗ್ರಾಂ) ಕಡು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದು ಮಳೆ ಆಶ್ರಯದಲ್ಲಿ ಬೆಳೆಯಲು ಸೂಕ್ತವಾದ ತಳಿ. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು.
ಎಲೆ ಮುದುಡು ನಂಜುರೋಗ ನಿರೋಧಕ ತಳಿಗಳು : ಮೂರು ಅರೆ ನಿರ್ಧಾರಿತ ಟೊಮಾಟೊ ತಳಿಗಳಾದ ಸಂಕ್ರಾಂತಿ, ನಂದಿ ಮತ್ತು ವೈಭವ್ ಟೊಮಾಟೊ ಎಲೆ ಮುದುಡು ನಂಜುರೋಗ ನಿರೋಧಕ ತಳಿಗಳನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಗಳು ಬೇಸಿಗೆಯಲ್ಲಿ ಬೆಳೆಯಲು ಸೂಕ್ತವಾಗಿವೆ.
12.ಸಂಕ್ರಾಂತಿ: ಹಣ್ಣುಗಳು ಮಧ್ಯಮ ಗಾತ್ರದಿಂದ ಕೂಡಿದ್ದು ದುಂಡನೆಯ ಆಕಾರ ಹೊಂದಿವೆ. ಇದೊಂದು ಮಧ್ಯಮ ಅವಧಿಯ ತಳಿ (95-105 ದಿನಗಳು). ಇದು ಎಲೆ ಮುದುಡು ನಂಜು ರೋಗಕ್ಕೆ ನಿರೋಧಕ ಶಕ್ತಿ ಪಡೆದಿದೆ. ಹೆಕ್ಟೇರಿಗೆ 40-45 ಟನ್ ಇಳುವರಿ ಪಡೆಯಬಹುದು.
13.ನಂದಿ: ಹಣ್ಣುಗಳು ಮಧ್ಯಮ ಗಾತ್ರದ್ದಾಗಿರುತ್ತವೆ. ಇದು ಅಧಿಕ ಇಳುವರಿ ಕೊಡುತ್ತದೆ. ಇದು ಕೂಡ ಎಲೆ ಮುದುಡು ನಂಜು ರೋಗಕ್ಕೆ ನಿರೋಧಕ ಶಕ್ತಿ ಪಡೆದಿದೆ. ಪ್ರತಿ ಹೆಕ್ಟೇರಿಗೆ 40-45 ಟನ್ ಇಳುವರಿ ಪಡೆಯಬಹುದು.
14.ವೈಭವ್: ಇದೂ ಕೂಡ ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಈ ತಳಿಯ ಹಣ್ಣುಗಳು ದೂರ ಸಾಗಾಣಿಕೆಗೆ ಸೂಕ್ತವಾದ ಗುಣಗಳನ್ನು ಹೊಂದಿರುತ್ತವೆ. ಹೆಕ್ಟೇರಿಗೆ 45-50 ಟನ್ ಇಳುವರಿ ಕೊಡುವ ಸಾಮಥ್ರ್ಯವನ್ನು ಹೊಂದಿದ್ದು ಎಲೆ ಮುದುಡು ನಂಜು ರೋಗ ನಿರೋಧಕ ಶಕ್ತಿ ಪಡೆದಿದೆ. ಈ ತಳಿಯು ದುಂಡಾಣು ಸೊರಗುರೋಗ ಹಾಗೂ ಅಧಿಕ ಉಷ್ಣತೆ ತಡೆಯುವ ಶಕ್ತಿಯನ್ನು ಸಹ ಹೊಂದಿರುತ್ತದೆ.
ಟೊಮಾಟೊ ಸಂಕರಣ ತಳಿಗಳು
1.ಅರ್ಕಾ ವಿಶಾಲ್: ಈ ಸಂಕರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ಬೆಳೆಯ ಅವಧಿ 165 ದಿನಗಳು. ಹಣ್ಣುಗಳು ದೊಡ್ಡ ಗಾತ್ರವಾಗಿದ್ದು (140 ಗ್ರಾಂ) ಕಡು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಕಾಯಿಗಳು ಬಿರುಕು ಬಿಟ್ಟು ಹಾಳಾಗುವುದಿಲ್ಲ. ಇದನ್ನು ಮಳೆಗಾಲ ಹಾಗೂ ಚಳಿಗಾಲಗಳೆರಡರಲ್ಲೂ ಬೆಳೆಯಬಹುದು. ಗಿಡಗಳಿಗೆ ಊರುಗೋಲು ಕೊಟ್ಟು ಬೆಳೆಸಬೇಕು. ಒಂದು ಹೆಕ್ಟೇರಿಗೆ 75 ಟನ್ ಇಳುವರಿ ಬರುತ್ತದೆ.
2.ಅರ್ಕಾ ವರದಾನ್: ಈ ಸಂಕರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ಬೆಳೆಯ ಅವಧಿ 160 ದಿವಸಗಳು. ಕಾಯಿಗಳ ಗಾತ್ರ ದೊಡ್ಡದು (140 ಗ್ರಾಂ). ಹಣ್ಣುಗಳು ಗುಂಡಾಗಿದ್ದು, ಕಡು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಕಾಯಿಗಳು ಬಿರುಕು ಬಿಡುವುದಿಲ್ಲ. ಈ ತಳಿಯು ಗಂಟು ಬೇರು ಜಂತು ಹುಳುಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆಳೆಯಬಹುದು. ಗಿಡಗಳಿಗೆ ಊರುಗೋಲು ಕೊಟ್ಟು ಬೆಳೆಸಬೇಕು. ಒಂದು ಹೆಕ್ಟೇರಿಗೆ 75 ಟನ್ ಇಳುವರಿ ಪಡೆಯಬಹುದು.
3.ಅರ್ಕಾ ಶ್ರೇಷ್ಠ : ಈ ಸಂಕರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ. ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, ಬೆಳೆಯ ಅವಧಿ 140 ದಿನಗಳು. ಹಣ್ಣುಗಳು ಮಧ್ಯಮ ಗಾತ್ರವಾಗಿದ್ದು (70-75 ಗ್ರಾಂ) ಗುಂಡಾಗಿದ್ದು, ಕಡು ಕೆಂಪು ಬಣ್ಣವನ್ನು ಹೊಂದಿದೆ. ಹಣ್ಣುಗಳು ಮೃದುವಾಗಿರುವುದಿಲ್ಲ. ಇದನ್ನು ಚಳಿಗಾಲದಲ್ಲಿ ಬೆಳೆಯಬಹುದು. ಈ ಸಂಕರಣ ತಳಿಗೆ ದುಂಡಾಣು ಸೊರಗು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಹಣ್ಣುಗಳು ಮಾರುಕಟ್ಟೆಗೆ ಮತ್ತು ಸಂಸ್ಕರಣೆಗೆ ಯೋಗ್ಯವಾಗಿರುತ್ತವೆ. ಒಂದು ಹೆಕ್ಟೇರಿಗೆ 76 ಟನ್ ಇಳುವರಿ ಬರುತ್ತದೆ.
4.ಅರ್ಕಾ ಅಭಿಜಿತ್: ಈ ಸಂಕರಣ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, ಬೆಳೆಯ ಅವಧಿ 140 ದಿನಗಳು. ಹಣ್ಣುಗಳು ಮಧ್ಯಮ ಗಾತ್ರವಾಗಿದ್ದು, (65-70 ಗ್ರಾಂ) ಗುಂಡಾಗಿದ್ದು, ಕಡು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಹಣ್ಣುಗಳು ಮೃದುವಾಗಿರುವುದಿಲ್ಲ. ಈ ತಳಿಗೆ ದುಂಡಾಣು ಸೊರಗು ರೋಗವನ್ನು ನಿರೋಧಿಸುವ ಶಕ್ತಿ ಇದೆ. ಒಂದು ಹೆಕ್ಟೇರಿಗೆ 65 ಟನ್ ಇಳುವರಿ ಪಡೆಯಬಹುದು.
5.ಅರ್ಕಾ ಅನನ್ಯ : ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯು ಅಭಿವೃದ್ಧಿಪಡಿಸಿ, ಬಿಡುಗಡೆ ಮಾಡಿದೆ. ಅಧಿಕ ಇಳುವರಿ ಕೊಡುವ ಸಂಕರಣ ತಳಿಯಾಗಿದ್ದು, ಎಲೆ ಮುದುಡು ಹಾಗೂ ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯನ್ನು ಪಡೆದಿದೆ. ಹಣ್ಣುಗಳು ಗುಂಡಾಗಿದ್ದು ಗಟ್ಟಿಯಾಗಿರುತ್ತವೆ. ಕಾಯಿಗಳು ಹಣ್ಣಾದಾಗ ಕಡು ಕೆಂಪು ಬಣ್ಣಕ್ಕೆ ತಿರುಗುತ್ತವೆ. 140 ದಿನಗಳಲ್ಲಿ ಸುಮಾರು 76 ಟನ್ ಪ್ರತಿ ಹೆಕ್ಟೇರಿಗೆ ಇಳುವರಿ ಕೊಡಬಲ್ಲದು.