:
ಸಸ್ಯ ಸಂರಕ್ಷಣೆ
ಕೀಟಗಳು :
ಕಾಂಡ ಕೊರೆಯುವ ಹುಳು, ನಿಂಬೆ ಪತಂಗ, ಎಲೆ ಸುರಂಗ, ಎಲೆ ತಿನ್ನುವ ಕೀಟ, ಸಸ್ಯಹೇನು, ಶಲ್ಕ ಕೀಟಗಳು, ಹಿಟ್ಟು ತಿಗಣೆ, ನುಸಿ, ಬಿಳಿನೊಣ ಮತ್ತು ಗೊಣ್ಣೆಹುಳು,
ಹತೋಟಿ ವಿಧಾನ
1. ಒಣಗಿದ ರೆಂಬೆಗಳನ್ನು ಕತ್ತರಿಸಿ ಗಿಡಗಳಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ನ್ನು ಪರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.
2. ಗಿಡದಲ್ಲಿ ಹೊಸ ಚಿಗುರು ಬಂದಾಗ 1.5 ಮಿ.ಲೀ. ಮೊನೋಕ್ರೊಟೋಫಾಸ್ ಅಥವಾ 2 ಮಿ.ಲೀ. ಪೆಂಥೋಯೇಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವ್ರದರಿಂದ ಸುರಳಿ ಪೂಚಿ, ಎಲೆ ತಿನ್ನುವ ಕೀಟ, ಸಸ್ಯಹೇನು ಮತ್ತು ಕಾಂಡ ಕೊರೆಯುವ ಹುಳದ ಬಾಧೆಯನ್ನು ತಡೆಗಟ್ಟಬಹುದು.
3. ಶಲ್ಕ ಕೀಟ, ಹಿಟ್ಟು ತಿಗಣೆ ಮತ್ತು ಬಿಳಿನೊಣದ ನಿಯಂತ್ರಣಕ್ಕಾಗಿ 4 ಗ್ರಾಂ ಕಾರ್ಬರಿಲ್ ಶೇ. 50 ಅಥವಾ 2 ಮಿ.ಲೀ. ಕ್ವಿನಾಲ್ಫಾಸ್ ಶೇ. 25 ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿರಿ. ಹತ್ತು ದಿನಗಳ ನಂತರ ಇದೇ ಸಿಂಪರಣೇಯನ್ನು ಪುನರಾವರ್ತಿಸಿ.
4. ಇರೀಯೋಫಿಡ್ ನುಶಿಯ ನಿಯಂತ್ರಣಕ್ಕಾಗಿ 2.5 ಮಿ.ಲೀ. ಡೈಕೋಫಾಲನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೇ ಮಾಡಿರಿ.
5. ಹಣ್ಣಿನ ಚಿಟ್ಟೆಯ ಹತೋಟಿಗಾಗಿ, 4 ಗ್ರಾಂ ಕಾರ್ಬರಿಲ್ ಶೇ. ೫೦ ಅಥವಾ 1.5 ಮಿ.ಲೀ. ಎಂಡೋಸಲ್ಫಾನ್ 35 ಇ.ಸಿ. ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿ.
6. ಕಾಂಡ ಕೊರೆಯುವ ಹುಳದ ಬಾಧೆಯನ್ನು ತಡೆಗಟ್ಟಲು, ಹುಳು ಕೊರೆದ ರಂಧ್ರಗಳಲ್ಲಿ ಒಂದು ಲೀಟರ್ ನೀರಿನಲ್ಲಿ 2 ಮಿ.ಲೀ. ಡೈಕ್ಲೋರೋವಾಸ್. ಬೆರೆಸಿ ಪ್ರತಿ ರಂಧ್ರದಲ್ಲಿ 2-5 ಮಿ.ಲೀ. ಔಷಧಿ ಹಾಕಿ ಹಸಿ ಮಣ್ಣಿನಿಂದ ರಂಧ್ರಗಳನ್ನು ಮುಚ್ಚಬೇಕು.