:
ಬಿತ್ತನೆ
ಕಪ್ಪು ಮಣ್ಣಿನ ಭೂಮಿಯಲ್ಲಿ ಎರಡು ಬಾರಿ ಹರಗಿ ಭೂಮಿಯನ್ನು ಸಿದ್ಧಪಡಿಸಬೇಕು. ಕೆಂಪು ಮಣ್ಣಿನ ಪ್ರದೇಶವಾದಲ್ಲಿ ಒಂದೆರಡು ಬಾರಿ ರೆಂಟೆ ಹೊಡೆಯಬೇಕಾಗುತ್ತದೆ. ಬಿತ್ತನೆಗೆ ಮೊದಲು ಬೀಜವನ್ನು ಎರಡು ಹೋಳಾಗಿ ಮಾಡಬೇಕು. ಒಂದು ಗುಂಡಾಗಿರುವ ಮರದ ತುಂಡನ್ನು ಬೀಜಗಳ ಮೇಲೆ ಉಜ್ಜುವ್ರದರಿಂದ ಹೋಳುಗಳನ್ನು ಮಾಡಬಹುದು. ಇದರಿಂದ ಬಿತ್ತನೆ ಬೀಜದಲ್ಲಿ ಉಳಿತಾಯವಾಗುವ್ರದಲ್ಲದೆ ಸರಿಯಾಗಿ ಮೊಳಕೆ ಬರಲು ಸಾಧ್ಯವಾಗುತ್ತದೆ.
ಬಿತ್ತುವ ಮೊದಲು ಶೇ. 50 ರಷ್ಟು ಸಾರಜನಕ, ಪೂರ್ತಿ ರಂಜಕ ಮತ್ತು ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಿ, ನಂತರ 22.5 ಸೆಂ.ಮೀ. ಅಂತರದ ಕೂರಿಗೆಯಿಂದ ಬೀಜಗಳನ್ನು ಬಿತ್ತಬೇಕು. ಬಿತ್ತಿದ 10-12 ದಿವಸಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ. ಬಿತ್ತನೆಯಾದ ೪ ವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು.
ಬಿತ್ತನೆ ಕಾಲ
ಮುಂಗಾರು ಬೆಳೆಯನ್ನು ಮೇ ಮತ್ತು ಜೂನ್ ತಿಂಗಳುಗಳಲ್ಲಿಯೂ, ಹಿಂಗಾರು ಬೆಳೆಯನ್ನು ಅಕ್ಟೋಬರ್ ಮಧ್ಯಭಾಗದಲ್ಲಿಯೂ ಬಿತ್ತಬಹುದು.