:
ತಳಿಗಳು
1.ವೈಟ್ ಐಸಿಕಲ್; ಇದೊಂದು ಬೇಗನೆ ಕೊಯ್ಲಿಗೆ ಬರುವ ತಳಿಗಳಲ್ಲಿ ಒಂದಾಗಿದ್ದು ಬಿತ್ತನೆ ಮಾಡಿದ 40 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ.
2.ಆಪಾನೀಸ್ ವೈಟ್: ಚಳಿಗಾಲಕ್ಕೆ ಉತ್ತಮ ತಳಿಯಾಗಿದ್ದು ಬೇರುಗಳು 38 ಸೆಂ.ಮೀ. ಉದ್ದವಾಗಿರುತ್ತವೆ. ಬಿತ್ತನೆ ಮಾಡಿದ ಸುಮಾರು 50 ದಿವಸಗಳಲ್ಲಿ ಕೊಯ್ಲಿಗೆ ಬರುತ್ತವೆ.
3.ಅರ್ಕಾ ನಿಶಾಂತ್: ಈ ತಳಿಯ ಬೇರುಗಳು ಬೆಳ್ಳಗೆ ಉದ್ದವಾಗಿದ್ದು ಚೂಪಾದ ತುದಿಯನ್ನು ಹೊಂದಿರುತ್ತವೆ. ಈ ತಳಿಯ ಬೇರುಗಳು ಬೆಂಡಾಗುವಿಕೆ ಹಾಗೂ ಕವಲು ಒಡೆಯುವಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ಬೇರುಗಳು ಮಧ್ಯಮ ಘಾಟು ವಾಸನೆಯನ್ನು ಹೊಂದಿದ್ದು ಬಿತ್ತನೆ ಮಾಡಿದ 50 ದಿವಸಗಳಲ್ಲಿ ಕೊಯ್ಲಿಗೆ ಬರುತ್ತವೆ.
4.ಪೂಸಾ ಚೇತಕಿ: ಇದರ ಬೇರುಗಳೂ ಮಧ್ಯಮ ಆಕಾರದಲ್ಲಿ ಚೂಪಾದ ತುದಿಯನ್ನು ಹೊಂದಿರುತ್ತವೆ. ಬೇರುಗಳು ಬಿಲಿ ಬಣ್ಣ ಹೊಂದಿದು ಮಧ್ಯಮ ಘಾಟು ವಾಸನೆ ಹೊಂದಿರುತ್ತವೆ ಬಿತ್ತನೆ ಮಡಿದ ಸುಮಾರು 40 ರಿಂದ 45 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ.
ಕರಾವಳಿ ಪ್ರದೇಶಕ್ಕೆ
1. ವೈಟ್ ಚೇತಕಿ
2. ಅರ್ಕಾ ನಿಶಾಂತ್
3. ಜಪನೀಸ್ ವೈಟ್