ಬಿತ್ತನೆ ಕಾಲ
ಇದು ಚಳಿಗಾಲದ ಬೆಳೆಯಾಗಿದೆ. ಆಗಸ್ಟ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ ಬಿತ್ತನೆ ಮಾಡಬಹುದು.
ಮಣ್ಣು
ಇದನ್ನು ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಈ ಬೆಳೆಗೆ ಉತ್ತಮ.
ತಳಿಗಳು
1. ಪೂಸಾ ಅರ್ಲಿ ಬಂಚಿಂಗ್: ಇದು ಒಂದು ಶೀಘ್ರ ಕಟಾವಿಗೆ ಬರುವ ತಳಿಯಾಗಿದೆ.
2. ಪೂಸಾ ಕಸ್ತೂರಿ ಸೆಲೆಕ್ಷನ್: ಇದು ಇನ್ನೊಂದು ಅಧಿಕ ಇಳುವರಿಯ ತಳಿ.
3. ಲಾಮ್ ಸೆಲೆಕ್ಷನ್: ಇದನ್ನು ಕೃಷಿ ಸಂಶೋಧನಾ ಕೇಂದ್ರ ಲಾಮ್. ಆಂಧ್ರಪ್ರದೇಶದಿಂದ ಅಭಿವೃದ್ಧಿಪಡಿಸಿರುವ ತಳಿ. ಇದು ಮಧ್ಯಮ ಎತ್ತರಕ್ಕೆ ಬೆಳೆದು ಹೆಚ್ಚು ರೆಂಬೆಗಳನ್ನು ಕೊಡುತ್ತದೆ.
ಬೇಸಾಯ ಸಾಮಗ್ರಿಗಳು
ಬಿತ್ತನೆ:
ಭೂಮಿಯನ್ನು ಹದ ಮಾಡಿದ ನಂತರ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಕೊಟ್ಟು ಮಣ್ಣಿನಲ್ಲಿ ಬೆರೆಸಬೇಕು. ಸಮಪಾತಳಿ ಹೊಂದಿರುವ 3 ಮೀಟರ್ ಉದ್ದ ಹಾಗೂ 2 ಮೀಟರ್ ಅಗಲದ ಸಸಿ ಮಡಿಗಳನ್ನು ತಯಾರಿಸಿ, ಪ್ರತಿ ಎರಡು ಸಸಿ ಮಡಿಗಳ ಸಾಲಿನ ನಡುವೆ ಒಂದು ನೀರಾವರಿ ಕಾಲುವೆಯನ್ನು ತೆಗೆಯಬೇಕು. ಹೀಗೆ ಭೂಮಿಯು ತಯಾರಾದ ನಂತರ ಶಿಫಾರಸ್ಸು ಮಾಡಿದ ಶೇ. 50 ರಷ್ಟು ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಒದಗಿಸುವ ಗೊಬ್ಬರವನ್ನು ಬಿತ್ತುವ್ರದಕ್ಕಿಂತ ಮೊದಲು ಮಡಿಗಳಿಗೆ ಕೊಡಬೇಕು. ನಂತರ ಬೀಜಗಳನ್ನು ತೆಳುವಾಗಿ ಚೆಲ್ಲಬೇಕು. ಬಿತ್ತನೆಯಾದ ನಮತರ ತೆಳುವಾಗಿ ನೀರನ್ನು ಒದಗಿಸಬೇಕು. ಬಿತ್ತನೆಯಾದ 20 ದಿನಗಳ ನಂತರ ಉಳಿದ ಶೇ. 50 ರಷ್ಟು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.
ನೀರಾವರಿ ಮತ್ತು ಅಂತರ ಬೇಸಾಯ:
ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ 4 ರಿಂದ 6 ದಿನಗಳಿಗೊಮ್ಮೆ ನೀರನ್ನು ಒದಗಿಸಬೇಕು. ಭೂಮಿಯನ್ನು ಕಳೆರಹಿತವಾಗಿಡಬೇಕು.
ಸಸ್ಯ ಸಂರಕ್ಷಣೆ
ರೋಗಗಳು: ಎಲೆ ಚುಕ್ಕೆರೋಗ ಮತ್ತು ಬೂಜು ತುಪ್ಪಟ ರೋಗ.
ಹತೋಟಿ ವಿಧಾನ:
ರೋಗಗಳ ಬಾಧೆ ಕಂಡು ಬಂದಾಗ 1 ಗ್ರಾಂ ಕಾರ್ಬೆಂಡಿಜಿಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು.
ಕೀಟಗಳು: ಹೇನು ಮತ್ತು ಎಲೆ ತಿನ್ನುವ ಹುಳು.
ಸೊಪ್ಪಿನಲ್ಲಿ ಕೀಟಬಾಧೆ ಕಂಡುಬಂದಾಗ ಬೆಳೆಗೆ 2 ಮಿ.ಲೀ. ಮೆಲಾಥಿಯಾನ್ ಅಥವಾ 4 ಗ್ರಾಂ ಕಾರ್ಬಾರಿಲ್ 1 ಲೀಟರ್ ನೀರಿಗೆ ಬೆರಸಿ ಸಿಂಪಡಿಸಿರಿ
ಕೊಯ್ಲು
ಬಿತ್ತನೆಯಾದ 25-30 ದಿನಗಳಲ್ಲಿ ಬೆಳೆಯು ಮೊದಲನೆಯ ಕಟಾವಿಗೆ ಬರುತ್ತದೆ. ಒಂದು ಬೆಳೆಯಿಂದ ಕನಿಷ್ಠ 4-6 ಕಟಾವ್ರಗಳನ್ನು ಮಾಡಬಹುದು.
ಇಳುವರಿ
ಚೆನ್ನಾಗಿ ಬೆಳೆದ ಬೆಳೆಯಿಂದ ಪ್ರತಿ ಹೆಕ್ಟೇರಿಗೆ 10,000 ದಿಂದ 12,000 ಕಿ.ಗ್ರಾಂ ಇಳುವರಿಯನ್ನು ಪಡೆಯಬಹುದು.
Download POP AppView POP website
Hemant Sharma
A User from Hanumangarh, Rajasthan,India
His contributions to agropediaOther ContributorsHistory
KVK-NetvKVKagropedia images New in agropedia Multilingual Editor