:
ತಳಿಗಳು
ದಕ್ಷಿಣ ಒಣ ಪ್ರದೇಶಕ್ಕೆ
1. ಹೊಸುರ್ ರೆಡ್ ಮತ್ತು ಹೊಸೂರ್ ಗ್ರಿನ್: ಸ್ಥಳೀಯ ತಳಿಗಳು
2. ವಿ-6: ಈ ತಳಿಯನ್ನು ಪಂಜಾಬ್ ರಾಜ್ಯದಿಂದ ಪರಿಚಯಿಸಲಾಗಿದೆ. ಈ ತಳಿಯ ಗೆಡ್ಡೆಗಳ ಬಣ್ಣ ಕೆಂಪಾಗಿದ್ದು ಒಳ್ಳೆಯ ಗುಣಮಟ್ಟವನ್ನು ಹೊಂದಿರುತ್ತವೆ. ಇದು ನಾಟಿ ಮಾಡಿದ 5 ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.
3. ವಿ-12: ಕೊಯಮತ್ತೂರಿನಿಂದ ಈ ಪ್ರದೇಶಕ್ಕೆ ತಂದ ತಳಿಯಾಗಿದ್ದು ಇದರ ಗೆಡ್ಡೆಗಳು ಕಂದು ಬಣ್ಣ ಹೊಂದಿವೆ. ನಾಟಿ ಮಾಡಿದ 4 ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.
4. ಎಚ್-41 ಮತ್ತು ಎಚ್-42: ಈ ಸಂಕರಣ ತಳಿಗಳನ್ನು ತ್ರಿವೇಂಡ್ರಂನ ಕೇಂದ್ರೀಯ ಗೆಡ್ಡೆ ಬೆಳೆ ಸಂಶೋಧನಾ ಸಂಸ್ಥೆಯಿಂದ ಅಭಿವೃದ್ಧಿಗೊಳಿಸಲಾಗಿದೆ.
ಕರಾವಳಿ ಪ್ರದೇಶಕ್ಕೆ
1. ಸಿ-43 : ಮಧ್ಯಮವಾಗಿ ಹರಡುವ ತಳಿಯಾಗಿದ್ದು ಬಿಳಿ ಗೆಡ್ಡೆಗಳನ್ನು ಹೊಂದಿರುತ್ತದೆ. ಶೀಘ್ರವಾಗಿ ಅಧಿಕ ಇಳುವರಿ ಕೊಡುವ ತಳಿ. 100 ರಿಂದ 110 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
2. ವಿ-35: ಅತಿಯಾಗಿ ಹಬ್ಬುವ ತಳಿಯಾಗಿದ್ದು 120 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ ಗೆಡ್ಡೆಗಳೂ ಮಧ್ಯಮ ಗಾತ್ರದವಾಗಿದ್ದು ಬಿಳಿ ಬಣ್ಣ ಹೊಂದಿರುತ್ತವೆ.
3. ವಿ-30: ಗೆಡ್ಡೆಗಳು ಮಧ್ಯಮ ಗಾತ್ರವಾಗಿದ್ದು ಹಳದಿ ಬಣ್ಣ ಹೊಂದಿರುತ್ತವೆ.
4. ಹೊಸೂರ್ ರೆಡ್.
5. ಎಚ್-41 ಮತ್ತು ಎಚ್-42.