:
ತಳಿಗಳು
1.ಕುಫ್ರಿ ಚಂದ್ರಮುಖಿ : ಇದು ಬೇಗನೆ ಕಟವಿಕೆ (85-95 ದಿವಸಗಳಲ್ಲಿ) ಬರುವ ತಳಿಗಯಾಗಿದೆ. ಗಡ್ಡೆಗಳು ದೊಡ್ಡ ಗಾತ್ರವಿದ್ದು ಮೊಟ್ಟೆ ಆಕಾರದ್ದಾಗಿರುತ್ತವೆ. ಅಡುಗೆ ತಯಾರಿಕೆಗೆ ಉತ್ತಮವೆಂದು ಕಂಡುಬಂದಿದೆ. ಈ ತಳಿ ಹೆಚ್ಚಿನ ರೋಗಗಳನ್ನು ತಡೆದುಕೊಳ್ಳಬಲ್ಲ ಶಕ್ತಿ ಹೊಂದಿದ್ದರೂ ಕೊನೆಯ ಅಂಗಮಾರಿ ರೋಗವನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.
2.ಕುಫ್ರಿ ಜ್ಯೋತಿ : ಈ ತಳಿಯು 95-100 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ. ಗಡ್ಡೆಗಳು ದೊಡ್ಡದಾಗಿದ್ದು, ಅಂಡಾಕಾರ ಹೊಂದಿದ್ದು, ಚಪ್ಪಟೆಯಾಗಿರುತ್ತವೆ. ಕೊನೆಯ ಅಂಗಮಾರಿ ರೋಗವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದ್ದು ಕಡಿಮೆ ಮಳೆಯ ಆಶ್ರಯದಲ್ಲಿಯೂ ಸಹ ಚೆನ್ನಾಗಿ ಬರುವ ತಳಿಯಾಗಿದೆ.
3.ಫ್ರಿ ಸಿಂಧೂರಿ : ಇದು ತಡವಾಗಿ ಕಟಾವಿಗೆ ಬರುವ ತಳಿಯಾಗಿದ್ದು 120-125 ದಿವಸಗಳಲ್ಲಿ ಕಟಾವಿಗೆ ಬರುತ್ತದೆ. ಗಡ್ಡೆ ಗುಂಡಾಗಿದ್ದು ಮಧ್ಯಮ ಗಾತ್ರದ ಮತ್ತು ತಿಳಿ ಕೆಂಪು ಬಣ್ಣದ್ದಾಗಿರುತ್ತದೆ. ಇದು ಒಳ್ಳೆಯ ಶೇಖರಣಾ ಸಾಮಥ್ರ್ಯ ಹೊಂದಿದೆ ಹಾಗೂ ತಡವಾಗಿ ಬರುವ ಅಂಗಮಾರಿ ರೊಗಕ್ಕೆ ಸಾಧಾರಣ ನಿರೋಧಕ ಶಕ್ತಿ ಹೊಂದಿದೆ.
4.ಕುಫ್ರಿ ಪುಕರಾಜ್ : ಇತ್ತೀಚಿಗೆ ಕರ್ನಾಟಕಕ್ಕೆ ಬಿಡುಗಡೆ ಮಾಡಿದ ತಳಿ. ಈ ತಳಿಯನ್ನು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಯಬಹುದಾಗಿದ್ದು, ಮಧ್ಯಮಾವಧಿಯಲ್ಲಿ (75-90 ದಿನಗಳಲ್ಲಿ) ಕೊಯ್ಲಿಗೆ ಬರುತ್ತದೆ. ಈ ತಳಿಯ ಹೂಗಳು ಬಿಳಿಯ ಬಣ್ಣದ್ದಾಗಿರುತ್ತವೆ ಗಡ್ಡೆಗಳು ದೊಡ್ಡ ಗಾತ್ರವಿದ್ದು, ಆಕರ್ಷಕ ಕಂದು ಬಣ್ಣದ್ದಾಗಿವೆ ಹಾಗೂ ಹೆಚ್ಚಿನ (30-32 ಟನ್/ಹೆ.) ಇಳುವರಿ ಕೊಡುವುದಾಗಿದ್ದು ಅಂಗಮಾರಿ ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.
5.ಕುಫ್ರಿ ಜವಾಹರ್ : 1996 ರಲ್ಲಿ ಬಿಡುಗಡೆಯಾದ ತಳಿ. ಅಲ್ಪಾವಧಿ ತಳಿಯಾಗಿದ್ದು (75 ದಿನಗಳು), ಮಳೆಯಾಶ್ರಯದಲ್ಲಿ ಮುಂಗಾರು ಬೆಳೆಯಾಗಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಯಲು ಸೂಕ್ತ. ಕುಬ್ಜಗಿಡ, ಕಡಿಮೆ ಕಾಂಡಗಳು, ತಿಳಿ ಹಸುರು ಎಲೆಗಳು, ಹೂವುಗಳ ಬಣ್ಣ ಬಿಳಿ, ಗಡ್ಡೆಗಳು ಹಾಲಿನ ಬಿಳಿ, ಮಧ್ಯಮ ಗಾತ್ರ ಕೊನೆಯ ಅಂಗಮಾರಿ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ.
6.ಕುಫ್ರಿ ಲವಕರ್ : ಅಲ್ಪಾವಧಿ ತಳಿಯಾಗಿದ್ದು 75-80 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಹೆಚ್ಚು ಉಷ್ಣಾಂಶವಿರುವ ಪ್ರದೇಶದಲ್ಲಿ ಬೆಳೆಯಬಹುದಾಗಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ನೀಡುತ್ತದೆ (25-30 ಟನ್/ಹೆ.) ಗಡ್ಡೆಗಳು ಗಾತ್ರದಲ್ಲಿ ದೊಡ್ಡವಿದ್ದು, ತಿರುಳು ಬಿಳಿಯ ಬಣ್ಣದಿಂದ ಕೂಡಿರುತ್ತದೆ. ಚಿಪ್ಸ್ ತಯಾರಿಕೆಗೆ ಸೂಕ್ತ ತಳಿ.