:
ತಳಿಗಳು
ದಕ್ಷಿಣ ಒಣ ಪ್ರದೇಶಗಳಿಗೆ:
1.ಜಪಾನೀಸ್ ಲಾಂಗ್ ಗ್ರೀನ್: ಇದು ಅಲ್ಪಾವಧಿಯಲ್ಲಿ ಬೆಳೆಯಲು ಅನುಕೂಲವಾಗಿದ್ದು ಅತ್ಯಧಿಕ ಇಳುವರಿ ಕೊಡುವುದು. 45 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವುದು. ಕಾಯಿಗಳು ಸುಮಾರು 30 ರಿಂದ 37 ಸೆಂ.ಮೀ. ಉದ್ದವಾಗಿದ್ದು ತಿರುಳು ಮಾತ್ರ ಬಿಳಿ ಹಾಗೂ ಹಸಿರು ಬಣ್ಣದಿಂದ ಕೂಡಿರುತ್ತದೆ.
2.ಸ್ಟ್ರೇಟ್: ಇದು ಕೂಡಾ ಅಲ್ಪಾವಧಿ ಬೆಳೆಯಾಗಿದ್ದು ಕಾಯಿಯ ಮೇಲೆ ಸಣ್ಣ ಮುಳ್ಳುಗಳಿರುತ್ತವೆ ಹಾಗೂ ಕಾಯಿಯ ತೊಗಟೆ ಹಸಿರು ಬಣ್ಣದಿಂದಿರುವುದು.
3.ಚೈನಾ: ಇದು ದೀರ್ಘಾವಧಿ ತಳಿಯಾಗಿದ್ದು 40 ಸೆಂ.ಮೀ. ಉದ್ದದ ತೆಳುವಾದ ಹಸಿರು ಕಾಯಿಗಳನ್ನು ಕೊಡುವುದು.
4.ಪಾಯಿನ್ಸೆಟ್: ಇದು ಒಂದು ವಿದೇಶಿ ತಳಿ. ಸಿಪ್ಪೆಯು ಹಸಿರು ಬಣ್ಣದಿಂದ ಕೂಡಿರುತ್ತದೆ. ಇದು ಬೂದಿ ರೋಗ, ಬೂಜು ತುಪ್ಪಟ ರೋಗ ಮತ್ತು ಎಲೆ ಚುಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
ಕರಾವಳಿ ಪ್ರದೇಶಗಳಿಗೆ: ಜಪಾನೀಸ್ ಲಾಂಗ್ಗ್ರೀನ್, ಸ್ಟ್ರೇಟ್, ಚೈನಾ, ಮೊಗಿ ಸೌತೆ, (ಮುಳ್ಳು ಸೌತೆ) ಸಾಂಬಾರು ಸೌತೆ.
ಗುಡ್ಡಗಾಡು ಪ್ರದೇಶಗಳಿಗೆ: ಜಪಾನೀಸ್ ಲಾಂಗ್ ಗ್ರೀನ್, ವೆಸ್ಟ್ ಕೋಸ್ಟ್ ಸ್ಥಳೀಯ ತಳಿ.