:
ಸಸ್ಯ ಸಂರಕ್ಷಣೆ
ಕೀಟಗಳು: ಜಿಗಿ ಹುಳು, ಹೇನು, ಮೂತಿಹುಳು ಮತ್ತು ಬೇರು ಗಂಟುಹುಳು.
ಹತೋಟಿ ವಿಧಾನ
1.3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ನ್ನು 1 ಲೀಟರ್ ನೀರಿನಲ್ಲಿ ಕರಗಿಸಿ, ಬಿತ್ತನೆಯಾದ 4 ವಾರಗಳ ನಂತರ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 400 ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ.
2.ಕ್ರಮಾಂಕ (1) ರಲ್ಲಿ ಸೂಚಿಸಲಾದ ಸಿಂಪರಣೆಯನ್ನೇ ಬಿತ್ತನೆಯಾದ 7 ವಾರಗಳ ನಂತರ ಪ್ರತಿ ಹೆಕ್ಟೇರಿಗೆ 450 ಲೀ. ಹಾಗೂ ಬಿತ್ತನೆಯಾದ 10 ವಾರಗಳ ನಂತರ 540 ಲೀ. ಸಿಂಪಡಿಸಬೇಕು.
3.ಬೇರು ಗಂಟು ಹುಳುವಿನ ಹತೋಟಿಗೆ ಕಾರ್ಬೋಫ್ಯೂರಾನ್ 3 ಜಿ. ಹರಳನ್ನು ಮಣ್ಣಿಗೆ ಸೇರಿಸಿ.
4.ಜಿಗಿಹುಳು, ಹೇನು, ಮೂತಿ ಹುಳುವಿನ ಹತೋಟಿಗೆ 1.5 ಮಿ.ಲೀ. ಡೈಮಿಥೊಯೆಟ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿ.