Please note that this site in no longer active. You can browse through the contents.
ಹಾಗಲಕಾಯಿ
ಹಾಗಲಕಾಯಿಯನ್ನು ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಕಬ್ಬಿಣಾಂಶ ಮತ್ತು ಜೀವಸತ್ವಗಳು ಈ ತರಕಾರಿಯಲ್ಲಿ ಹೇರಳವಾಗಿವೆ. ಇದರ ಕಹಿ ಅಂಶವು ಔಷಧಿ ಗುಣಗಳನ್ನು ಹೊಂದಿರುತ್ತದೆ.
ಮಣ್ಣು
ಈ ಬೆಳೆಯನ್ನು ಎಲ್ಲಾ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಇದು ನೀರು ಬಸಿದು ಹೋಗುವಂತಹ ಮಣ್ಣಿನಲ್ಲಿ ಮತ್ತು ಗೋಡುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಸುಧಾರಿತ ತಳಿಗಳು
1.ಅರ್ಕಾ ಹರಿತ್: ಇದರ ಕಾಯಿಗಳು ಹಸಿರು ಬಣ್ಣದ್ದಾಗಿದ್ದು, ತಿರುಳು ದಪ್ಪವಾಗಿದ್ದು ರಸಭರಿತವಾಗಿದೆ. ಪ್ರತಿ ಹೆಕ್ಟೇರಿಗೆ 12,500 ಕಿ.ಗ್ರಾಂ ಇಳುವರಿ ಕೊಡುತ್ತದೆ.
2.ಕೊಯಮತ್ತೂರ್ ಲಾಂಗ್: ಅಧಿಕ ಇಳುವರಿ ಕೊಡುವ ತಳಿಯಾಗಿದ್ದು ಕಾಯಿಗಳು ಉದ್ದವಾಗಿದ್ದು ತಿಳಿ ಹಸಿರು ಬಣ್ಣ ಹೊಂದಿವೆ.
ಬೇಸಾಯ ಸಾಮಗ್ರಿಗಳು
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1. ಬೀಜ 8 ಕಿ.ಗ್ರಾಂ
ಬಿತ್ತನೆ ಕಾಲ
ಮುಂಗಾರು ಬೆಳೆಯನ್ನು ಜೂನ್-ಜುಲೈ ಹಾಗೂ ಬೇಸಿಗೆ ಬೆಳೆಯನ್ನು ಜನವರಿ-ಫೆಬ್ರುವರಿ ತಿಂಗಳುಗಳಲ್ಲಿ ದಕ್ಷಿಣ ಒಣ ಪ್ರದೇಶಗಳಲ್ಲಿ ಬೆಳೆಯಬಹುದು. ಕರಾವಳಿ ಪ್ರದೇಶದಲ್ಲಿ ನವೆಂಬರ್-ಡಿಸೆಂಬರ್, ಗುಡ್ಡಗಾಡು ಪ್ರದೇಶಗಳಲ್ಲಿ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಬೆಳೆಯಬಹುದು.
1. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 18 ಟನ್
2. ರಸಾಯನಿಕ ಗೊಬ್ಬರಗಳು
ಸಾರಜನಕ 63 ಕಿ.ಗ್ರಾಂ
ರಂಜಕ 50 ಕಿ.ಗ್ರಾಂ
ಸಸ್ಯ ಸಂರಕ್ಷಣೆ
ರೋಗಗಳು: ಬೂದಿ ರೋಗ, ಚಿಬ್ಬು ರೋಗ, ಹಳದಿ ನಂಜು ರೋಗ, ಬೇರು ಗಂಟು ಜಂತು ರೋಗ
ಕೀಟಗಳು: ಹಣ್ಣು ನೊಣ, ಕೆಂಪು ಕುಂಬಳ ದುಂಬಿ ಮತ್ತು ರಂಗೋಲಿ ಹುಳು
ಕೊಯ್ಲು
ಕಾಯಿಗಳು ಎಳೆಯದಾಗಿದ್ದಾಗ ಕೊಯ್ಯಬೇಕು. 3-4 ದಿವಸಗಳಿಗೊಮ್ಮೆ ಕಾಯಿ ಕೀಳಬೇಕು.
ಇಳುವರಿ
ಪ್ರತಿ ಹೆಕ್ಟೇರಿಗೆ ಸುಮಾರು 7,500 ದಿಂದ 10,000 ಕಿ.ಗ್ರಾಂ ಇಳುವರಿ ಬರುತ್ತದೆ.
Download POP AppView POP website
Hemant Sharma
A User from Hanumangarh, Rajasthan,India
His contributions to agropediaOther ContributorsHistory
KVK-NetvKVKagropedia images New in agropedia Multilingual Editor