:
ವಿವರಗಳು
|
ಪ್ರತಿ ಹೆಕ್ಟೇರಿಗೆ
|
ಸಸಿಗಳು (1.8 ಮೀ. x 1.8 ಮೀ.)
|
3086
|
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 10 ಕಿ.ಗ್ರಾಂ ಪ್ರತಿ ಗಿಡಕ್ಕೆ
|
30 ಟನ್ಗಳು
|
ಸಸ್ಯಾಭಿವೃದ್ಧಿ : ಏಲಕ್ಕಿಯನ್ನು ಬೀಜ, ಮರಿಕಂದುಗಳಿಂದ ಹಾಗೂ ಅಂಗಾಂಶ ಕೃಷಿ ವಿಧಾನದಿಂದ ಅಭಿವೃದ್ಧಿಪಡಿಸಬಹುದು.
ಸಸಿಮಡಿ ತಯಾರಿಕೆ : ನೀರು ಬಸಿದು ಹೋಗುವಂತಹ ಇಳಿಜಾರಾದ ಪ್ರದೇಶವನ್ನು ಆಯ್ಕೆ ಮಾಡಿ. 1 ಮೀ. ಅಗಲ, 5 ಮೀ. ಉದ್ದ, 25 ಸೆಂ.ಮೀ. ಎತ್ತರದ ಸಸಿಮಡಿ ತಯಾರಿಸಿ ಅದರ ಮೇಲೆ ಕಾಂಪೋಸ್ಟ್ ಅಥವಾ ಫಲವತ್ತಾದ ಮಣ್ಣನ್ನು ತೆಳುವಾಗಿ ಹರಡಬೇಕು. ಸಸಿಮಡಿಯನ್ನು ಫಾರ್ಮಲಿನ್ ದ್ರಾವಣದಿಂದ (1 ಭಾಗ ಶೇ. 40 ರ ಫಾರ್ಮಾಲಿನ್ಡಿಹೈಡ್ಗೆ 50 ಭಾಗ ನೀರು) ಬಿತ್ತನೆಗೆ ಒಂದು ವಾರ ಮುಂಚಿತವಾಗಿ ಉಪಚರಿಸಿ 1 ಅಥವಾ 2 ದಿವಸಗಳವರೆಗೆ ಪಾಲಿಥೀನ್ ಹಾಳೆಗಳಿಂದ ಹೊದಿಸಬೇಕು. 1 ಸಸಿಮಡಿ ಉಪಚರಿಸಲು 40 ರಿಂದ 50 ಲೀಟರ್ ಫಾರ್ಮಲಿನ್ ದ್ರಾವಣ ಬೇಕಾಗುತ್ತದೆ.
ಬೀಜಗಳ ಆಯ್ಕೆ ಮತ್ತು ಬೀಜೋಪಚಾರ: ಹೆಚ್ಚು ಇಳುವರಿ ಕೊಡುವ ಹಾಗೂ ರೋಗಮುಕ್ತ ತೋಟಗಳಿಂದ ಬೀಜಗಳನ್ನು ಆಯ್ಕೆ ಮಾಡಿ. ಎರಡನೇ ಕೊಯ್ಲಿನ (ಸೆಪ್ಟೆಂಬರ್ ಮೊದಲನೆ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ) ಬಲಿತ ಬೀಜಗಳನ್ನು ಆಯ್ಕೆ ಮಾಡಿ. ಆಗ ತಾನೇ ಬೇರ್ಪಡಿಸಿದ ಬೀಜಗಳನ್ನು ಶೇ. 25ರ ನೈಟ್ರಿಕ್ ಆಮ್ಲದಲ್ಲಿ ನೆನೆಸಿ. ಆಗಿಂದಾಗ್ಗೆ ಬೀಜಗಳನ್ನು ಕಲುಕುತ್ತಾ ನಂತರ ನೀರಿನಲ್ಲಿ 2-3 ಸಲ ತೊಳೆದು ನೆರಳಿನಲ್ಲಿ ಒಣಗಿಸಿ. ಅನಂತರ ಸಸಿಮಡಿಗಳಲ್ಲಿ ಬಿತ್ತನೆ ಮಾಡಿ.
ಪ್ರಾಥಮಿಕ ಸಸಿಮಡಿ : ಬೀಜಗಳನ್ನು 15 ಸೆಂ.ಮೀ. ಸಾಲುಗಳಲ್ಲಿ 1 ರಿಂದ 2 ಸೆಂ.ಮೀ. ಆಳದಲ್ಲಿ ಪ್ರತಿ ಸಾಲಿನಲ್ಲಿ 50 ರಿಂದ 60 ಬೀಜಗಳು ಇರುವಂತೆ ಬಿತ್ತನೆ ಮಾಡಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ 100 ರಿಂದ 150 ಗ್ರಾಂ ಉಪಚರಿಸಿದ ಬೀಜಗಳು ಬೇಕಾಗುತ್ತವೆ. ಅನಂತರ ಮರಳು ಅಥವಾ ಮಣ್ಣಿನಿಂದ ಸಾಲುಗಳನ್ನು ತೆಳುವಾಗಿ ಮುಚ್ಚಿ, ಅದರ ಮೇಲೆ ಒಂದು ಪದರ ಬತ್ತದ ಹುಲ್ಲು ಅಥವಾ ಯೋಗ್ಯವಾದ ವಸ್ತುವಿನಿಂದ ಹೊದಿಕೆ ಮಾಡಬೇಕು. ಪ್ರತಿದಿನ ತಪ್ಪದೇ ನೀರು ಕೊಡಬೇಕು. ಬಿತ್ತನೆಯಾದ 30 ರಿಂದ 35 ದಿನಗಳ ಅನಂತರ ಶೇ. 75 ಕ್ಕಿಂತ ಹೆಚ್ಚಿನ ಬೀಜಗಳು ಮೊಳಕೆಯೊಡೆಯುವ್ರದು ಕಂಡುಬಂದಾಗ ಹೊದಿಕೆಯನ್ನು ತೆಗೆಯಿರಿ. ಅನಂತರ, ಸಸಿಗಳಿಗೆ ನೆರಳನ್ನು ನೀಡಿ ಪ್ರತಿ ಸಸಿಮಡಿಗೆ 100 ಗ್ರಾಂ ಸಂಯುಕ್ತ ರಸಗೊಬ್ಬರ ಹಾಕಿ, ಸಸಿಗಳನ್ನು 10 ವಾರಗಳ ನಂತರ ಎರಡನೇ ಸಸಿಮಡಿಯಲ್ಲಿ ನಾಟಿ ಮಾಡಿ.
ಎರಡನೇ ಸಸಿಮಡಿ : 5 ಮೀ. ಉದ್ದ x 1 ಮೀ. ಅಗಲ x 25 ಸೆಂ.ಮೀ ಎತ್ತರದ 8 ರಿಂದ 10 ಸಸಿಮಡಿ ತಯಾರಿಸಿ. ಸಸಿಗಳನ್ನು 22x15 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಿ. ವಾರಕ್ಕೆ ಎರಡು ಸಲ ನೀರು ಕೊಡಿ. ಪ್ರತಿ ಸಸಿಮಡಿಗೆ 100, 200, 300 ಮತ್ತು 400 ಗ್ರಾಂ ಗೊಬ್ಬರದ ಮಿಶ್ರಣ (ಕ್ರಮವಾಗಿ ಯೂರಿಯಾ, ಸೂಪರ್ ಫಾಸ್ಫೇಟ್ ಮತ್ತು ಮ್ಯೂರಿಯೆಟ್ ಆಫ್ ಪೊಟ್ಯಾಷ್ ಅನ್ನು 1:3:1 ಪ್ರಮಾಣದಲ್ಲಿ) 1,2,3 ಮತ್ತು 4 ತಿಂಗಳುಗಳಲ್ಲಿ ಒದಗಿಸಿ, 5 ನೇ ತಿಂಗಳಿನ ನಂತರ 500 ಗ್ರಾಂ ಗೊಬ್ಬರದ ಮಿಶ್ರಣವನ್ನು ಪ್ರತಿ ತಿಂಗಳು ನಾಟಿಮಾಡುವ ತನಕ ಕೊಡಿ.
ಸಸಿಗಳಿಗೆ 10 ರಿಂದ 15 ಕೆ. ಲಕ್ಸ್. ಬೆಳಕು ಬೇಕಾಗುತ್ತದೆ. ಇದನ್ನು ತೆಂಗಿನ ಗರಿ ಅಥವಾ ಹೆಣೆದ ನಾರಿನ ಚಾಪೆಯ ಹೊದಿಕೆಯಿಂದ ಒದಗಿಸಬಹುದು.
ಸಸಿಮಡಿ ವಿಧಾನಗಳು
ಅಕ್ಟೋಬರ್ ನಂತರ ಸಸಿಮಡಿ ಮಾಡುವ್ರದಾದರೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ.
1. ಬಿತ್ತನೆಯಾದ ನಂತರ ಸಸಿಮಡಿಗಳಿಗೆ 15-20 ಸೆಂ.ಮೀ. ಎತ್ತರಕ್ಕೆ ಕೋಲುಗಳನ್ನು ನೆಡಿ.
2. ಈ ಎಲ್ಲ ಕೋಲುಗಳನ್ನು ಜಿ.ಐ. ತಂತಿಯಿಂದ ಸೇರಿಸಿ ಚಪ್ಪರದಾಕಾರಕ್ಕೆ ನಿಲ್ಲಿಸಿ.
3. . ಪಾಲಿಥೀನ್ ಹಾಳೆಯನ್ನು ಚಪ್ಪರದ ಮೇಲೆ ಹೊದಿಸಿ. ಪಾಲಿಥೀನ್ ಹಾಳೆಯ ಒಂದು ಅಂಚನ್ನು ಮಣ್ಣಿನಲ್ಲಿ ಸೇರಿಸಿ ಇನ್ನೊಂದು ಭಾಗವನ್ನು ಹಾಗೆಯೇ ಬಿಡಿ.
4. ಸಸಿಮಡಿಗಳನ್ನು ಪಾಲಿಥೀನ್ ಹಾಳೆಯಿಂದ ಹೊದಿಸಿ ನೀರು ಕೊಡಿ. ಸಸಿಮಡಿಗಳಿಗೆ ಗಾಳಿ ಹೋಗದಂತೆ ಎಚ್ಚರವಹಿಸಿ. ಮೂರು ದಿವಸಗಳಿಗೊಮ್ಮೆ ನೀರು ಕೊಟ್ಟು ಪಾಲಿಥೀನ್ ಹಾಳೆಯನ್ನು ಮುಚ್ಚಿ.
5. ಶೇ. 50 ರಷ್ಟು ಬೀಜಗಳು ಮೊಳಕೆಯೊಡೆದಾಗ ಪ್ಲಾಸ್ಟಿಕ್ ಹೊದಿಕೆ ತೆಗೆಯಿರಿ.
6. ಈ ವಿಧಾನದಿಂದ ಹೊರ ವಾತಾವರಣಕ್ಕಿಂತ 5 ರಿಂದ 60 ಸೆ. ಉಷ್ಣಾಂಶ ಹೆಚ್ಚಾಗಿ 40 ದಿವಸಗಳಲ್ಲಿ ಶೇ. 80 ರಷ್ಟು ಬೀಜಗಳು ಮೊಳಕೆಯೊಡೆಯುತ್ತವೆ.
ನಾಟಿ ಮಾಡುವ್ರದು: 60x60x45 ಸೆಂ. ಮೀ. ಅಳತೆಯ ಗುಣಿಗಳನ್ನು ಸಮಪಾತಳಿ ರೇಖೆಗನುಗುಣವಾಗಿ ತೆಗೆಯಿರಿ. ಅವ್ರಗಳನ್ನು ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಮಣ್ಣಿನ ಮಿಶ್ರಣದಿಂದ ತುಂಬಿ. ಸಸಿಗಳನ್ನು ಗುಣಿಗಳ ಮಧ್ಯದಲ್ಲಿ ನಾಟಿ ಮಾಡಿ ಕೋಲಿನಿಂದ ಆಧಾರ ಕೊಡಬೇಕು. ಕಂದುಗಳನ್ನು ಬಳಸುವ್ರದಾದರೆ 8 ರಿಂದ 10 ಸೆಂ.ಮೀ. ಉದ್ದದ ಕೊಂಬುಗಳನ್ನು ಬಳಸಿ. ಕೊಂಬುಗಳನ್ನು ಶಿಲೀಂದ್ರನಾಶಕ ದ್ರಾವಣದಲ್ಲಿ (ಶೇ. 0.2 ಕ್ಯಾಪ್ಟಾನ್ನಲ್ಲಿ) ಅದ್ದಿ ನಾಟಿ ಮಾಡಬೇಕು.