:
ಕಳೆ ನಿಯಂತ್ರಣ
ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಲೀಟರ್ ನೀರಿಗೆ 3 ಮಿ.ಲೀ. ಪೆಂಡಿಮಿಥೆಲಿನ್ ಅಥವಾ 2.2 ಮಿ.ಲೀ. ಅಲಾಕ್ಲೋರ್ ಕಳೆನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 1000 ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಬೇಕು. ಕಳೆನಾಶಕವನ್ನು ಸಿಂಪಡಿಸುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು ಅಥವಾ ಬಿತ್ತನೆ ಮಾಡಿದ 3 ವಾರಗಳ ನಂತರ (ಕಳೆಗಳು 3 ರಿಂದ 5 ಎಲೆಗಳ ಹಂತದಲ್ಲಿದ್ದಾಗ) ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ. ಇಮ್ಯಾಝೆತಾಪೈರ್ ಕಳೆನಾಶಕವನ್ನು ಸಿಂಪಡಿಸಬೇಕು ಜೊತೆಗೆ ಬಿತ್ತನೆ ಮಾಡಿದ 6 ವಾರಗಳ ನಂತರ ಎರಡು ಸಾಲುಗಳ ಮಧ್ಯೆ ಸ್ಟ್ರೆಹುಡ್ನ್ನು ಉಪಯೋಗಿಸಿ ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ. ಪ್ಯಾರಾಕ್ವಾಟ್ ಕಳೆನಾಶಕ ಬೆರೆಸಿ ಕಳೆಗಳ ಮೇಲೆ ಮಾತ್ರ ಸಿಂಪರಣೆ ಮಾಡಬೇಕು.
ಮಿಶ್ರ ಬೆಳೆಗಳಲ್ಲಿ ಕಳೆಗಳ ಹತೋಟಿ (ವಲಯ 1)
ತೊಗರಿ ಮೂಲಾಧಾರಿತ ಮಿಶ್ರ ಬೆಳೆ ಯೋಜನೆಗಳಾದ ತೊಗರಿ + ಉದ್ದು, ತೊಗರಿ + ಹೆಸರು, ತೊಗರಿ + ಜೋಳ, ತೊಗರಿ + ಎಳ್ಳು ಇವುಗಳಲ್ಲಿ ಬಿತ್ತಿದ ದಿನ ಅಥವಾ ಬಿತ್ತಿದ ಮರುದಿನ 2.7 ಮಿ.ಲೀ. ಪ್ಲುಕ್ಲೋರಾಲಿನ್ ಶೇ. 45 ಅಥವಾ 4 ಮಿ.ಲೀ. ಅಲಾಕ್ಲೋರ್ ಶೇ. 50 ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಬೇಕು. ಸಿಂಪರಣೆಯ ಸಮಯದಲ್ಲಿ ಮಣ್ಣು ಹುಡಿಯಾಗಿದ್ದು, ಸಾಕಷ್ಟು ತೇವದಿಂದ ಕೂಡಿರಬೇಕು. ಹೆಕ್ಟೇರಿಗೆ 1000 ಲೀಟರ್ ಸಿಂಪರಣಾ ದ್ರಾವಣ ಉಪಯೋಗಿಸಬೇಕು.
ಸೂಚನೆ
1. ಅನವಶ್ಯಕ ಬೆಳವಣಿಗೆಯನ್ನು ಕುಂಠಿತಗೊಳಿಸಲು ಬಿತ್ತಿದ 70 ದಿನಗಳ ನಂತರ 3 ಮಿ.ಲೀ. ಮೆಪಿಕ್ವಾಟ್ ಕ್ಲೋರೈಡ್ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
2. ಮೊಗ್ಗು, ಹೂ ಮತ್ತು ಕಾಯಿ ಉದುರುವಿಕೆ ತಡೆಗಟ್ಟಲು ಬೆಳೆಯು ಮೊಗ್ಗು ಹಂತದಲ್ಲಿದ್ದಾಗ 20 ಪಿಪಿಎಂ (100 ಲೀ. ನೀರಿನಲ್ಲಿ 2 ಮಿ.ಲೀ. ಎನ್ಎಎ ಬೆರೆಸುವುದು) ನ್ಯಾಪ್ತಲೀನ್ ಅಸಿಟಿಕ್ ಅಸಿಡ್ ಆಮ್ಲವನ್ನು 15 ದಿನಗಳ ಅಂತರದಲ್ಲಿ 3 ಬಾರಿ ಸಿಂಪಡಿಸಬೇಕು.
3. ತೊಗರಿ ಇಳುವರಿ ಹೆಚ್ಚಿಸಲು ಟ್ರೈಕಾಂಟಿನಾಲ್ ಸಸ್ಯವರ್ಧಕವನ್ನು ಪ್ರತಿ ಲೀಟರ್ ನೀರಿಗೆ 0.5 ಮೀ. ಬೆರೆಸಿ ಬೆಳೆ ಹೂವಾಡುವಾಗ (ಬಿತ್ತಿದ 75 ದಿನಗಳ ನಂತರ) ಹಾಗೂ ಕಾಯಿ ಕಟ್ಟುವಾಗ (ಬಿತ್ತಿದ 90 ದಿನಗಳ ನಂತರ) ಸಿಂಪಡಿಸಬೇಕು.