:
ಸಸ್ಯಾಭಿವೃದ್ಧಿ
1. ವಾಣಿಜ್ಯ ವಿಧಾನ: ಕಣ್ಣು ಕಸಿ.
2. ಬೇರು ಸಸಿಗಳನ್ನು ಬೆಳೆಸುವ್ರದು: ಕಾಡು ಜಾತಿಯ ಗುಲಾಬಿಗಳ (ರೋಜಾ ಇಂಡಿಕಾ, ರೋಜಾ ಮಲ್ಟಿಫ್ಲೋರಾ, ಮುಳ್ಳುರಹಿತ-ನಿಶ್ಕಂಟ್) ಕಾಂಡದ ತುಂಡುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಸಮಪಾತಳಿ ಪಾತಿಗಳಲ್ಲಿ ನಾಟಿ ಮಾಡಬೇಕು. ಈ ತುಂಡುಗಳು ಸುಮಾರು 6 ತಿಂಗಳುಗಳಲ್ಲಿ ಚೆನ್ನಾಗಿ ಬೆಳೆದು ಪೆನ್ಸಿಲ್ ಗಾತ್ರದ ರೆಂಬೆಗಳನ್ನು ಪಡೆಯುತ್ತವೆ. ಈ ರೆಂಬೆಗಳಿಗೆ ಇಚ್ಛಿಸಿದ ತಳಿಗಳ ಕಣ್ಣುಗಳನ್ನು ತಂದು ಕಣ್ಣು ಕಸಿ ಮಾಡಬೇಕು. ಸುಮಾರು 30-45 ದಿನಗಳಲ್ಲಿ ಕಣ್ಣು ಕೂಡುತ್ತವೆ. ಅನಂತರ ಇವ್ರಗಳನ್ನು ಕುಂಡಗಳಲ್ಲಿ ಇಲ್ಲವೇ ಬೆಳೆ ಕ್ಷೇತ್ರದಲ್ಲಿ ನಾಟಿ ಮಾಡಬಹುದು.
ಬೇಸಾಯ ಕ್ರಮಗಳು
ನಾಟಿ ಮಾಡುವ್ರದು: ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಹದಗೊಳಿಸಿ 45 ಘನ ಸೆಂ.ಮೀ. ಗಾತ್ರದ ಗುಣಿಗಳನ್ನು 75x75 ಸೆಂ.ಮೀ. ಅಂತರದಲ್ಲಿ ಸಂಕರಣ ತಳಿಗಳಿಗೆ ಹಾಗೂ 60x60 ಸೆಂ.ಮೀ. ಎರಡು ಕಿ.ಗ್ರಾಂ ಉತ್ತಮ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗುಣಿಗೆ ತುಂಬಿ ಕಣ್ಣು ಹಾಕಿದ ಭಾಗವ್ರ ಸುಮಾರು 15 ಸೆಂ.ಮೀ. ನಷ್ಟು ಭೂಮಿಯಿಂದ ಮೇಲಿರುವಂತೆ ನಾಟಿ ಮಾಡಿ ಅವ್ರಗಳಿಗೆ ಕೋಲಿನ ಆಸರೆ ಕೊಟ್ಟು ಅಲುಗಾಡದಂತೆ ನೋಡಿಕೊಳ್ಳಬೇಕು. ಒಂದು ಹೆಕ್ಟೇರಿಗೆ ಬೇಕಾಗುವ ಕಸಿ ಮಾಡಿದ ಗಿಡಗಳ ಪ್ರಮಾಣ ಹೀಗಿದೆ 1 ಮೀ. x 1 ಮೀ. : 10,000, 75 x 75 ಸೆಂ.ಮೀ. : 13,333 60 x 60 ಸೆಂ.ಮೀ. : 20,800.