:
ಜೈವಿಕ ಗೊಬ್ಬರ
ಅಜೋಸ್ಪಿರಿಲ್ಲಮ್ 500 ಗ್ರಾಂ
ಸಾವಯವ ಗೊಬ್ಬರಗಳು
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 8 ಟನ್
ರಾಸಾಯನಿಕ ಗೊಬ್ಬರಗಳು (ಕಿ.ಗ್ರಾಂ/ಹೆಕ್ಟೇರ್)
|
ಸಾರಜನಕ
|
ರಂಜಕ |
ಪೋಟ್ಯಾಷ್
|
ಜಿಪ್ಸ್ಮ್
|
ನೀರಾವರಿ |
60 |
75 |
60 |
100 |
ಖುಷ್ಕಿ |
35 |
50 |
35 |
- |
ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರದ ಜೊತೆಗೆ 10 ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ ಸತುವಿನ ಸಲ್ಫೇಟ್ ಬಳಸುವ್ರದರಿಂದ ಸೂರ್ಯಕಾಂತಿ ಇಳುವರಿಯನ್ನು ಹೆಚ್ಚಿಸಬಹುದು.
ಸೂಚನೆಗಳು
ತಾಮ್ರ ಗಣಿಯ ತ್ಯಾಜ್ಯ ವಸ್ತುವನ್ನು (ಸಿ.ಓ.ಟಿ.) ಪ್ರತಿ ಹೆಕ್ಟೇರಿಗೆ ಒಂದು ಟನ್ನಂತೆ ಬಿತ್ತುವುದಕ್ಕಿಂತ ಮೂರುವಾರ ಮೊದಲು ಕೊಟ್ಟಿಗೆ ಗೊಬ್ಬರದ ಜೊತೆ ಅಥವಾ ಬಿತ್ತುವ ಸಮಯದಲ್ಲಿ ರಾಸಾಯನಿಕ ಗೊಬ್ಬರಗಳ ಜೊತೆಗೆ ಮಣ್ಣೀಗೆ ಸೇರಿಸುವುದರಿಂದ ಬೆಳೆಗೆ ಬೇಕಾಗುವ ಅವಶ್ಯ ಲಘುಪೋಷಕಾಂಶಗಳಾದ ತಾಮ್ರ, ಕಬ್ಬಿಣ, ಮ್ಯಾಂಗನೀಸ್ ಮತ್ತು ಸತುವುಗಳನ್ನು ಪೂರೈಸಬಹುದು.
ಶೇಂಗಾ+ಸೂರ್ಯಕಾಂತಿ (3:1) ಬೆಳೆ ಪದ್ಧತಿಯಲ್ಲಿ ಆಯಾ ಬೆಳೆಗಳ ವಿಸ್ತೀರ್ಣಕ್ಕನುಗುಣವಾಗಿ ಶೇಂಗಾ ಬೆಳೆಗೆ 19:38:19 ಕಿ.ಗ್ರಾಂ ನಷ್ಟು ಸಾ: ರಂ: ಪೋ. ಪ್ರತಿ ಹೆಕ್ಟೇರಿಗೆ ಹಾಗೂ ಸೂರ್ಯಕಾಂತಿ ಬೆಳೆಗೆ 9:13:9 ಕಿ.ಗ್ರಾಂ ಸಾ: ರಂ: ಪೋ. ಪ್ರತಿ ಹೆಕ್ಟೇರಿಗೆ ರಸಗೊಬ್ಬರ ಬಳಸುವದರಿಂದ ಅಧಿಕ ಇಳುವರಿ ಪಡೆಯಬಹುದು.
ಅಜೋಸ್ಪಿರಿಲಮ್ (ಎ.ಸಿ.ಡಿ.15/ಎ.ಸಿ.ಡಿ-20) ಜೈವಿಕಗೊಬ್ಬರದಿಂದ ಬೀಜೋಪಚಾರ ಮಾಡುವುದರಿಂದ ಬೆಳೆಗೆ ಶಿಫಾರಸು ಮಾಡಿದ ಶೇ. 25 ರಷ್ಟು ಸಾರಜನಕದ ಉಳಿತಾಯವಾಗುವುದು.
ಪ್ರತಿ ಕಿ.ಲೋ ಗ್ರಾಂ ಬಿತ್ತನೆ ಬೀಜಕ್ಕೆ 5 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲೂಎಸ್ ನ್ನು ಲೇಪಿಸಿದಾಗ್ಯೂ 14 ತಿಂಗಳವರೆಗೆ ಉತ್ತಮ ಮೊಳಕೆ ಪ್ರಮಾಣವನ್ನು ಕಾಪಾಡಬಹುದು.