ಆ.
|
ರೋಗಗಳು
|
ಲಕ್ಷಣ ಮತ್ತು ಹಾನಿ
|
ನಿರ್ವಹಣಾ ಕ್ರಮಗಳು
|
1 |
ಅಲ್ಟರ್ನೇರಿಯಾ ಎಲೆ ಚುಕ್ಕೆ ರೋಗ
|
ಹಳದಿ ಉಂಗುರದಿಂದ ಸುತ್ತುವರೆದ ಕಂದು ಬಣ್ಣದ ಚುಕ್ಕೆಗಳು ಕೆಳಗಿನ ಎಲೆಗಳಿಂದ ಆರಂಭವಾಗುತ್ತವೆ. ಒಂದಕ್ಕೊಂದು ಕೂಡಿ ಕೊಂಡು ದೊಡ್ಡ ಮಚ್ಚೆಗಳಾಗುತ್ತವೆ ನಂತರ ಕಾಂಡ ಹಾಗೂ ಎಲೆಗಳ ಮೇಲೂ ಕಾಣಿಸಿ ಕೊಂಡು ಆ ಭಾಗಗಳು ಒಣಗುತ್ತವೆ. |
ಬೀಜ ಬಿತ್ತುವ್ರದಕ್ಕಿಂತ ಮೊದಲು ಒಂದು ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕಾರ್ಬಾಕ್ಸಿನ್ 75 ಡಬ್ಲೂ.ಪಿ ಅಥವಾ ಕ್ಯಾಪ್ಟಾನ್ 80 ಡಬ್ಲೂ.ಪಿ ಅಥವಾ ಮ್ಯಾಂಕೋಜೆಬ್ 75 ಡಬ್ಲೂ.ಪಿ ನಿಂದ ಬೀಜೋಪಚಾರ ಮಾಡಬೇಕು. 2ಗ್ರಾಂ ಜೈನೆಬ್ 80 ಡಬ್ಲೂ.ಪಿ ಅಥವಾ ಮ್ಯಾಂಕೋಜೆಬ್ 75ಡಬ್ಲೂ.ಪಿ ಅಥವಾ 1ಮಿ.ಲೀ. ಹೆಕ್ಸಾಕೋನೋಜೋಲ್ 5 ಇ.ಸಿ. ಶಿಲೀಂದ್ರನಾಶಕವನ್ನು 1 ಲೀ. ನೀರಿನಲ್ಲಿ ಬೆರೆಸಿ ಬಿತ್ತನೆಯಾದ 40, 55, 65 ನೇ ದಿವಸಗಳಲ್ಲಿ ಬೆಳೆಗೆ ಸಿಂಪಡಿಸಬೇಕು. |
2 |
ತುಕ್ಕು ರೋಗ (ಕುಂಕುಮ ರೋಗ)
|
ಎಲೆಗಳ ಕೆಳಭಾಗದಲ್ಲಿ ಕಬ್ಬಿಣದ ತುಕ್ಕು ಬಣ್ಣದ ಬೊಕ್ಕೆಗಳ ರೂಪದಲ್ಲಿ ರೋಗ ಲಕ್ಷಣಗಳು ಆರಂಭಗೊಂಡು ನಂತರ ಎಲೆ ಹಾಗೂ ಕಾಂಡಗಳ ಬಹು ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಸೋಂಕು ಉಂಟಾದ ಎಲೆ, ದೇಟು, ಹೂ, ಕಾಂಡದ ಭಾಗಗಳು ಒಣಗುತ್ತವೆ
|
2 ಗ್ರಾಂ ಜೈನೆಬ್ 80 ಡಬ್ಲೂ.ಪಿ ಅಥವಾ ಮ್ಯಾಂಕೋಜೆಬ್ 75 ಡಬ್ಲೂ.ಪಿ ಪ್ರತಿ ಲೀ. ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ 2-3 ಬಾರಿ ಸಿಂಪರಣೆ ಕೈಗೊಳ್ಳಬೇಕು.
|
3 |
ಕೇದಿಗೆ ರೋಗ
|
ಎಲೆಗಳ ಕೆಳಭಾಗದಲ್ಲಿ ಹತ್ತಿಯಮತೆ ಬಳಿ ಶಿಲೀಂದ್ರದ ಬೆಳವಣಿಗೆ ಕಂಡು ಬಂದು ಗಿಡದ ಬೆಳವಣಿಗೆ ಕುಂಠಿತವಾಗಿರುತ್ತದೆ. ಎಲೆಯ ನರಗಳು ತಿಳಿ ಹಳದಿ ವರ್ಣಕ್ಕೆ ತಿರುಗುತ್ತವೆ. ಗಿಡಗಳು ಗಿಡ್ಡವಾಗಿ ತೆನೆಯಲ್ಲಿ ಕಾಳು ತುಂಬುವ್ರದಿಲ್ಲ.
|
ಬೀಜ ಬಿತ್ತವ್ರದಕ್ಕೆ ಮೊದಲು ಪ್ರತಿ ಕಿ.ಗ್ರಾಂ ಬೀಜಕ್ಕೆ 6 ಗ್ರಾಂ ಶೇ. 8ರ ಮೆಟಲಾಕ್ಸಿಲ್ ನೀರಿನಲ್ಲಿ ಕರಗುವ ಪುಡಿಯಿಂದ ಬೀಜೋಪಚಾರ ಮಾಢಬೇಕು. ರಿಡೋಮಿಲ್ ಎಮ್.ಝುಡ್. 72 ಡಬ್ಲೂ.ಪಿ 3 ಗ್ರಾಂ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆಯನ್ನು 20, 40 ಹಾಗೂ 60 ನೇ ದಿನದಲ್ಲಿ ಮಾಡಬೇಕು. |
4 |
ಬೂದಿ ರೋಗ |
ಗಿಡದ ಕೊನೆಯ ಎಲೆಗಳ ಮೇಲ್ಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ತುಕಡಿಗಳು ಕಾನಿಸುತ್ತದೆ. ತದನಂತರ ಈ ಲಕ್ಷಣಗಳು ಸಸ್ಯಗಳ ಟೊಂಗೆ ಮತ್ತು ತೆನೆಗಳ ಮೇಲೆ ಗೋಚರಿಸುವವ್ರ ಈ ಲಕ್ಷಣಗಳು ತದನಂತರ ಒಂದಕ್ಕೊಂದು ಕೂಡಿಕೊಂಡು ಎಲೆಕಾಂಡ ಮತ್ತು ತೆನೆಯ ಮೇಲೆ ಹರಡಿ ಪೂರ್ತಿ ಸಸ್ಯಗಳು ಬಿಳಿ ಬೂದಿ ಬಣ್ಣದಿಂದ ಆವೃತಗೊಂಡಂತೆ ಕಾಣಿಸುತ್ತದೆ.
|
ಬೂದಿ ರೋಗದ ನಿರ್ವಹಣೆಗಾಗಿ ಡೈಫೆನ್ಕೋನಾಜೋಲ್ 25 ಇ.ಸಿ. 1 ಮಿ.ಳಿ. ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ರೋಗದ ಲಕ್ಷಣಗಳು ಕಾನಿಸಿಕೊಂಡ ತಕ್ಷಣ ಮತ್ತು 15 ದಿವಸಗಳ ನಮತರ ಸಿಂಪರಣೆ ಮಾಡಬೇಕು. |
5 |
ನೆಕ್ರೋಸಿಸ್ ನಂಜಾಣು ರೋಗ |
ಎಲೆಗಳ ಅಂಚಿನಿಂದ ಒಣಗುವಿಕೆ ಆರಂಭಗೊಂಡು ಕಾಂಡದ ಮೂಲಕ ಬೆಳೆಯುವ ಚಿಗುರಿಗೆ ವ್ಯಾಪಿಸಿಕೊಳ್ಳುತ್ತದೆ. ಗಿಡಗಳು ಮುರುಟಾಗಿ ಬೆಳವಣಿಗೆ ನಿಂತು ಬಿಡುತ್ತದೆ. ಗಿಡದಲ್ಲಿ ಕಾಳು ಕಟ್ಟುವ್ರದಿಲ್ಲ
|
ಬಿತ್ತನೆಗೆ ಮುಂಚೆ ಇಮಿಡಾಕ್ಲೋಪ್ರಿಡ್ 70 ಡಬ್ಲು.ಎಸ್ ಕೀಟನಾಶಕದಿಂದ ಪ್ರತಿ ಕಿ.ಗ್ರಾಂ ಬೀಜಕ್ಕೆ 5 ಗ್ರಾಂ ನಂತೆ ಬೀಜೋಪಚಾರ ಮಾಡಬೇಕು ಇದರಿಂದ ಥ್ರಿಪ್ಸ್ನುಸಿಯ ಹತೋಟಿಯಾಗುವ್ರದರಿಂದ ರೋಗ ಪ್ರಸಾರ ಕಡಿಮೆಯಾಗುವ್ರದು. ಹೊಲದ ಸುತ್ತಲೂ 3-4 ಸಾಲು ಎತ್ತರಕ್ಕೆ ಬೆಳೆಯುವ ಜೋಳ ಅಥವಾ ಮೆಕ್ಕೆ ಜೋಳ ಅಥವಾ ಸಜ್ಜೆಯನ್ನು 15 ದಿನಗಳ ಮುಂಚೆ ಬಿತ್ತಬೇಕು. ಬಿತ್ತಿದ 30 ದಿನಗಳ ನಂತರ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಕೀಟನಾಶಕವನ್ನು 0.25 ಮಿ.ಲೀ. ಅಥವಾ ಅಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ 1.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೊಲವನ್ನು ಕಳೆರಹಿತವಾಗಿ (ಮುಖ್ಯವಾಗಿ ಪಾರ್ಥೇನಿಯಂ ಮತ್ತು ಕಾಂಥಿಯಂ) ಸ್ವಚ್ಛವಾಗಿಡಬೇಕು. ರೋಗಗ್ರಸ್ತ ಗಿಡಗಳು ಕಂಡುಬಂದಲ್ಲಿ ಅವ್ರಗಳನ್ನು ಕಿತ್ತು ನಾಶಪಡಿಸಬೇಕು. ಜೂನ್ ಮೊದಲ ವಾರದಿಂದ ಅಗಸ್ಟ್ ಎರಡನೆಯ ವಾರದವರೆಗೆ ಸೂರ್ಯಕಾಂತಿ ಬಿತ್ತನೆ ಮಾಡಬಾರದು. ಹಿಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿತ್ತನೆ ಮಾಡುವ್ರದು ಸೂಕ್ತ. ನೀರಾವರಿ ಸೌಲಭ್ಯವಿದ್ಧಲ್ಲಿ ಮೇ ತಿಂಗಳಲ್ಲಿ ಬಿತ್ತನೆ ಮಾಡುವ್ರದು ಸೂಕ್ತ. |