:
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ)
ಬೀಜ ಖುಷ್ಕಿ 8-10 ಕಿ.ಗ್ರಾಂ
ಬೀಜ ನೀರಾವರಿ 5.0-7.5 ಕಿ.ಗ್ರಾಂ
ಬಿತ್ತನೆ: ಖುಷ್ಕಿ
ಬಿತ್ತುವ್ರದಕ್ಕಿಂತ 2-3 ವಾರಗಳ ಮುಂಚೆಯೇ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ನ್ನು ಮಣ್ಣಿನಲ್ಲಿ ಸೇರಿಸಬೇಕು. ಬೀಜವನ್ನು 90 ಸೆಂ.ಮೀ. ಸಾಲುಗಳಲ್ಲಿ 45 ಸೆಂ.ಮೀ. ಅಂತರದಲ್ಲಿ ಬಿತ್ತಿ ಶೇ. 50 ಭಾಗ ಸಾರಜನಕ, ಪೂರ್ತಿ ರಂಜಕ ಮತ್ತು ಪೂರ್ತಿ ಪೊಟ್ಯಾಷ್ ಒದಗಿಸುವ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ಬಿತ್ತನೆಯಾದ 40-45 ದಿವಸಗಳ ನಂತರ ಉಳಿದ ಶೇ. 50 ಭಾಗ ಸಾರಜನಕ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಒದಗಿಸಬೇಕು.
ಬಿತ್ತನೆ: ನೀರಾವರಿ
ಸೆಂಮುಂಗಾರು ಮಳೆ ಬೀಳುವ ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡಿ 90 ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ತಯಾರಿಸಬೇಕು. ಬಿತ್ತುವ್ರದಕ್ಕೆ ಮುಂಚೆ ಶೇ. 50 ರಷ್ಟು ಶಿಫಾರಸ್ಸು ಮಾಡಿದ ಸಾರಜನಕ, ಪೂರ್ತಿ ರಂಜಕ ಮತ್ತು ಪೊಟ್ಯಾಷ್ಗಳನ್ನು ಸಾಲುಗಳಲ್ಲಿ ಬೆರೆಸಬೇಕು. ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕಾರ್ಬನ್ಡೈಜಿಮ್ ಶೇ. 50 ಡಬ್ಲೂ.ಪಿ ದಿಂದ ಬೀಜೋಪಚಾರ ಮಾಡಬೇಕು. ಬೋದುಗಳಲ್ಲಿ 60.ಮೀ. ಅಂತರದಲ್ಲಿ ಬೀಜವನ್ನು ಬಿತ್ತಬೇಕು. ಬಿತ್ತಿದ 45 ದಿವಸಗಳ ನಂತರ ಉಳಿದ ಸಾರಜನಕವನ್ನು ಮೇಲುಗೊಬ್ಬರವಾಗಿ ಒದಗಿಸುವ್ರದು.