ಕ್ರ.ಸಂ |
ರೋಗ |
ಲಕ್ಷಣ ಮತ್ತು ಹಾನಿ |
ನಿರ್ವಹಣಾ ಕ್ರಮಗಳು |
1 |
ಸಸಿ ಕೊಳೆ ರೋಗ |
ಹೊಲದಲ್ಲಿ ಸಸಿಗಳು ಅಲ್ಲಲ್ಲಿ ಬಾಡಿ ಒಣಗಲು ಪ್ರಾರಂಭಿಸುತ್ತವೆ ಬೇರಿನ ಭಾಗದಲ್ಲಿ ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿದ ಸೋಂಕು ಕಂಡುಬರುವ್ರದು. |
ಬಿತ್ತನೆ ಬೀಜವನ್ನು 2 ಗ್ರಾಂ ಕ್ಯಾಪ್ಟಾನ್ 80 ಡಬ್ಲೂ.ಪಿ ಅಥವಾ ಥೈರಾಮ್ 75 ಡಬ್ಲೂ.ಪಿ ಅಥವಾ 4 ಗ್ರಾಂ ಟ್ರೈಕೋಡರ್ಮಾದಿಂದ ಉಪಚರಿಸಿ ಬಿತ್ತನೆಗೆ ಉಪಯೋಗಿಸಬೇಕು.
|
2 |
ದುಂಡಾಣುವಿನ ಎಲೆ ಚುಕ್ಕೆ ರೋಗ ಹಾಗೂ ಅಂಗಮಾರಿ ರೋಗ
|
ಕಂದು ಬಣ್ಣದ ನುಣುಪಾದ ಚುಕ್ಕೆಗಳು ಎಲೆಗಳ ಮೇಲೆ ಕಂಡು ಬಂದು ಕ್ರಮೇಣ ದೊಡ್ಡದಾಗಿ ಒಂದಕ್ಕೊಂದು ಕೂಡಿಕೊಂಡು ಎಲೆ, ಎಲೆದೇಟು ಹಾಗೂ ಕಾಂಡದ ಮೇಲೆ ಹರಡಿ ಅಂಗಮಾರಿ ರೋಗ ಉಂಟುಮಾಡುತ್ತವೆ. ಮುಂಗಾರಿ ಹಂಗಾಮಿನಲ್ಲಿ ರೋಗದ ಬಾಧೆ ಹೆಚ್ಚು. |
ಬಿತ್ತನೆಗೆ ಮೊದಲು ಬೀಜವನ್ನು ಅರ್ಧ ಗ್ರಾಂ ಅಗ್ರಿ ಮೈಸಿನ್ 100 ಮತ್ತು 1.57 ಗ್ರಾಂ ಪಾದರಸ ಸಂಯುಕ್ತ ವಸ್ತುವಿನ ಜೊತೆಗೆ ಒಂದು ಲೀ. ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ 6 ಗಂಟೆಗಳ ಕಾಲ ನೆನೆಯಿಸಿ ನಂತರ ಅರ್ಧ ಗಂಟೆ ಒಣಗಿಸಿ ಬಿತ್ತನೆಗೆ ಉಪಯೋಗಿಸಬೇಕು.
|
3 |
ಸಕೋಸ್ಫೊರಾ ಎಲೆ ಚುಕ್ಕೆ ರೋಗ |
ವೃತ್ತಾಕಾರದ ಕಂದು ಬಣ್ಣದ ಬಿಳಿಕೇಂದ್ರವನ್ನು ಹೊಂದಿದ ಚುಕ್ಕೆಗಳು ಎಲೆ, ಕಾಂಡ ಹಾಗೂ ಇತರ ಭಾಗಗಳಿಗೆ ಹರಡಿ ಅಂಗಮಾರಿ ರೋಗ ಲಕ್ಷಣಗಳನ್ನುಂಟು ಮಾಡುತ್ತವೆ. |
ಕಾರ್ಬೆನ್ಡೈಜಿಮ್ 50 ಡಬ್ಲೂ.ಪಿ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಕೈಗೊಳ್ಳಬೇಕು. |
4 |
ಅಲ್ಟರ್ನೇರಿಯಾ ಅಂಗಮಾರಿ ರೋಗ |
ಎಲೆಗಳ ಮೇಲೆ ಕಂದು ಬಣ್ಣದ ವೃತ್ತಾಕಾರದ ಚುಕ್ಕೆಗಲ ರೂಪದಲ್ಲಿ ರೋಗ ಲಕ್ಷಣಗಳು ಕಂಡುಬಂದು ಗಿಡದ ಎಲ್ಲ ಭಾಗಗಳಿಗೂ ಹರಡಬಹುದು. ಚುಕ್ಕೆಗಳಲ್ಲಿ ಅನೇಕ ವೃತ್ತಗಳು ಒಂದಾದ ನಂತರ ಒಂದು ಹೊಂದಿಕೊಂಡಂತೆ ಕಂಡು ಬರುತ್ತವೆ. ರೋಗದ ತೀವ್ರತೆ ಉಂಟಾದಾಗ ಎಲೆ ಹಾಗೂ ಇತರೆ ಭಾಗಗಳು ಸುಟ್ಟಂತೆ ಕಂಡುಬರುವವ್ರ. |
ಮ್ಯಾಂಕೋಜೆಮ್ 50 ಡಬ್ಲೂ.ಪಿ. 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 2-3 ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಕೈಗೊಳ್ಳಬೇಕು. |
5 |
ಬೂದಿರೋಗ |
ಬಿಳಿ ಬಣ್ಣದಬೂದಿ ಹುಡಿಯು ಮಚ್ಚೆಗಳು ಎಲೆಯ ಮೇಲ್ಭಾಗದಲ್ಲಿ ಕಂಡು ಬರುವವ್ರ ಮತ್ತು ಗಿಡದ ಹೆಚ್ಚು ಭಾಗಕ್ಕೆ ಹರಡುವವ್ರ. |
ಕಾರ್ಬೆನ್ಡೈಜಿಮ್ 50 ಡಬ್ಲೂ.ಪಿ 0.5 ಗ್ರಾಂ ಅಥವ 4 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಶೇ. 80 ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆಯನ್ನು ರೋಗಲಕ್ಷಣಗಳು ಕಂಡ ಕೂಡಲೇ ಕೈಕೊಳ್ಳಬೇಕು. ಅವಶ್ಯಕತೆಯ ಮೇರೆಗೆ 15 ದಿನಗಳ ಅಂತರದಲ್ಲಿ ಇದೇ ಸಿಂಪರಣೆಯನ್ನು ಮುಂದುವರೆಸಬೇಕು. |