:
ತಳಿಗಳು
ಕಾಲಿಪಟ್ಟಿ: ಗಿಡಗಳು ದಟ್ಟ ಹಸಿರು ಎಲೆಗಳಿಂದ ಕೂಡಿದ್ದು ಟೊಂಗೆಗಳು ಹೆಚ್ಚಾಗಿರುತ್ತವೆ ಹಣ್ಣುಗಳು ಮೊಟ್ಟೆ ಆಕಾರದಲ್ಲಿದ್ದು, ಕಡಿಮೆ ಬೀಜಗಳನ್ನು ಹೊಂದಿರುತ್ತವೆ. ತಿರುಳು ಸಿಹಿಯಾಗಿದ್ದು ಅತ್ಯುತ್ತಮ ಗುಣಮಟ್ಟದಾಗಿರುತ್ತದೆ.
ಕ್ರಿಕೆಟ್ ಬಾಲ್: ಹಣ್ಣುಗಳು ದೊಡ್ಡವಾಗಿದ್ದು ದುಂಡನೆಯ ಆಕಾರ ಹೊಂದಿರುತ್ತವೆ. ತಿರುಳು ಸಾಧಾರಣ ಗುಣಮಟ್ಟ ಹೊಂದಿರುತ್ತದೆ.
ಡಿ.ಎಚ್.ಎಸ್-1; ಕೃಷಿ ವಿಶ್ವವಿದ್ಯಲಯ, ಧಾರವಾಡದ ಸಂಕರಣ ತಳಿ. ಕಾಲಿಪತ್ತಿ ಮತ್ತು ಕ್ರಿಕೆಟ್ ಬಾಲ್ ತಳಿಗಳಿಗಿಂತ ಶೇ. 30-40 ರಷ್ಟು ಹೆಚ್ಚು ಇಳುವರಿ ಕೊಡುವುದು. ಹಣ್ಣಿನ ಗುಣಮಟ್ಟ ಎರಡೂ ತಳಿಗಳಿಗಿಂತ ಅತ್ಯುತ್ತಮವಾಗಿದೆ. ಹಣ್ಣುಗಳ ಗಾತ್ರ ದೊಡ್ಡದಾಗಿದ್ದು (150 ಗ್ರಾಂ) ತತ್ತಿಯಾಕಾರವನ್ನೂ ಹೋಲುತ್ತವೆ. ಹಣ್ಣಿನ ತಿರುಳು ಮೃದು ಮತ್ತು ಸಿಹಿಯಾಗಿದ್ದು (ಟಿ.ಎಸ್.ಎಸ್. ಶೇ. 25) ತಿಳಿ ಕಿತ್ತಳೆ ಬಣ್ಣ ಹೊಂದಿದೆ.
ಡಿ.ಎಚ್.ಎಸ್.-2: ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಸಂಕರಣ ತಳಿ (ಕಾಲಿಪಟ್ಟಿ ಕ್ರಿಕೆಟ್ಬಾಲ್) ಇದು ಕಾಲಿಪಟ್ಟಿ ಮತ್ತು ಕ್ರಿಕೆಟ್ ಬಾಲ್ ತಳಿಗಳಿಗಿಂತ ಶೇ. 30-35 ರಷ್ಟು ಹೆಚ್ಚು ಇಳುವರಿ ಕೊಡುವುದು. ಹಣ್ಣುಗಳು ಗೋಲಾಕಾರ ಹೊಂದಿದ್ದು ಕ್ರಿಕೆಟ್ ಬಾಲ್ ತಳಿಗಿಂತ ದೊಡ್ಡದಾಗಿರುತ್ತವೆ (180 ಗ್ರಾಂ). ಹಣ್ಣಿನ ತಿರುಳು ಮೃದು ಮತ್ತು ಸಿಹಿಯಾಗಿದ್ದು (ಟಿ.ಎಸ್.ಎಸ್.) ಶೆ. 25) ಕಿತ್ತಳೆ ಕಂದು ಬಣ್ಣ ಹೊಂದಿದೆ.