:
ಸಸ್ಯ ಸಂರಕ್ಷಣೆ
ರೋಗಗಳು : ಶಿಲೀಂದ್ರ ಎಲೆ ಚುಕ್ಕೆ ರೋಗ, ದುಂಡಾಣು ಅಂಗಮಾರಿ ರೋಗ, ಹಣ್ಣು ಕೊಳೆ ರೋಗ (ಅಂಥ್ರಾಕ್ನೋಸ್) ಮತ್ತು ಸೊರಗು ರೋಗ,
ದಾಳಿಂಬೆ ದುಂಡಾಣು ಅಂಗಮಾರಿ ರೋಗದ ಸಮಗ್ರ ನಿರ್ವಹಣಾ ಕ್ರಮಗಳು
ಚಾಟನಿ ಕಾಲ |
ಸೆಪ್ಟೆಂಬರ್ / ಅಕ್ಟೊಬರ್ / ನವೆಂಬರ್ ತಿಂಗಳು, |
ಬೋರ್ಡೋ ಮಿಶ್ರಣ (ಶೇ.1) ಸಿಂಪರಣೆ |
ಇಥ್ರೆಲ್ ಸಿಂಪಡಣೆಯ 3 ದಿನ ಮೊದಲು, |
ಇಥ್ರೆಲ್ (ಪ್ರತಿ ಲೀ. ನೀರಿಗೆ 2 ಮಿ.ಲೀ.) ಸಿಂಪರಣೆ |
ಸೆಪ್ಟೆಂಬರ್ / ಅಕ್ಟೊಬರ್ / ನವೆಂಬರ್, |
ಬೋರ್ಡೋ ಮಿಶ್ರಣ (ಶೇ.1) ಸಿಂಪಡಣೆ |
ಇಥ್ರೆಲ್ ಸಿಂಪಡಣೆಯ 3 ದಿನ ನಂತರ, |
ಬ್ಲೀಚಿಂಗ್ ಪೌಡರ್ |
ಪ್ರತಿ ಗಿಡಕ್ಕೆ 150 ಗ್ರಾಂ (ಗಿಡದ ಸುತ್ತ ಮಣ್ಣಿಗೆ ಸೇರಿಸುವುದು), |
ವಿಶ್ರಾಂತಿ ಕಾಲ |
4-5 ತಿಂಗಳುಗಳು. |
(12-15 ದಿನಗಳ ಅಂತರದಲ್ಲಿ) |
(ಪಗರತಿ ಲೀ. ನೀರಿಗೆ) |
ಮೊದಲನೇ ಮತ್ತು ಎರಡನೇ ಸಿಂಪಡಣೆ |
0.5 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಷಿನ್ + 0.5 ಗ್ರಾಂ. ಬ್ಯಾಕ್ಟ್ರಿಮ್ ಡಿ.ಎಸ್. + 2.5 ಗ್ರಾಂ. *ತಾಮ್ರದ ಆಕ್ಸಿಕ್ಲೋರೈಡ್. |
ಮೂರನೇ ಮತ್ತು ನಾಲ್ಕನೇ ಸಿಂಪರಣೆ |
0.5 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಲಿನ್ + 2.5 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಸಿಂಪರಣೆ -0.2 ಗ್ರಾಂ. ಸ್ಯಾಲಿಸಿಲಿಕ್ ಆಮ್ಲ. |
ಐದು, ಆರು ಮತ್ತು ಏಳನೇ ಸಿಂಪರಣೆ |
0.3 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಲಿನ್ + 0.5 ಗ್ರಾಂ. **ಆಂಫಿಕ್ಲಾಕ್ಸ್ + 2.0 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್. |
ಸಿಂಪರಣೆ |
0.2 ಗ್ರಾಂ. ಸ್ಯಾಲಿಸಿಲಿಕ್ ಆಮ್ಲ. |
ಎಂಟನೇ ಸಿಂಪರಣೆ |
0.5 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಲಿನ್ + 0.5 ಗ್ರಾಂ. ಆಂಫಿಕ್ಲಾಕ್ಸ್ + 2.0 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್. |
ಒಂಬತ್ತನೇ ಸಿಂಪರಣೆ |
0.3 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಲಿನ್ + 0.5 ಗ್ರಾಂ ಆಂಫಿಕ್ಲಾಕ್ಸ್ + 2.0 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್. |
ಹತ್ತನೇ ಸಿಂಪರಣೆ |
0.5 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಲಿನ್ + 2.0 ಗ್ರಾಂ. ತಾಮ್ರದಲ್ಲಿ ಆಕ್ಸಿಕ್ಲೋರೈಡ್ + 2.0 ಗ್ರಾಂ. ಸುಪೋಫ್ ಇ ಸ್ಸುಜೀಜ್ / ಆಂಫಿಕ್ಲಾಕ್ಸ್ 0.5 ಗ್ರಾಂ. |
ಹನ್ನೊಂದು ಮತ್ತು ಹನ್ನೆರಡನೇ ಸಿಂಪರಣೆ |
0.5 ಸ್ಟ್ರೆಪ್ಟೋಸೈಕ್ಲಿನ್ / ಕೆ-ಸೈಕ್ಲಿನ್ + 0.5 ಗ್ರಾಂ. (ಅವಶ್ಯಕತೆ ಇದ್ದಲ್ಲಿ) ಆಂಫಿಕ್ಲಾಕ್ + 2.0 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್
|
# ಹೂ ಬಿಡುವ ಕಾಲದಲ್ಲಿ ಕಾಪರ್ ಆಕ್ಸಿಕ್ಲೋರೈಡ್ ( ) ನ ಬದಲು 1 ಗ್ರಾಂ. ಕಾರ್ಬನ್ಡಜಿಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
# ** ಆಂಫಿಕ್ಲಾಕ್ಸ್ = ಆಂಪಿಸಿಲಿನ್ ಟ್ರೈಹೈಡ್ರೈಡ್ 250 ಪಿ.ಪಿ.ಎಂ. + ಕ್ಲಾಕ್ಸಸಿಲಿನ್ ಡೋಡಿಯಂ 250 ಪಿ.ಪಿ.ಎಂ.
# ಜೀವರಸಾಯನಿಕಗಳನ್ನು ಸಿಂಪಡಿಸದ ಎರಡು ದಿನಗಳ ನಂತರ ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್, ಕಬ್ಬಿಣದ ಸಲ್ಫೇಟ್, ಕ್ಯಾಲ್ಸಿಯಂ ಸಲ್ಪೇಟ್, ಮೆಗ್ನಿಷಿಯಂ
ಸಲ್ಫೇಟ್, ಬೋರಿಕ್ ಆಮ್ಲ ಮತ್ತು ಕ್ಯಾಲ್ಸಿಯಂ ನೈಟ್ರೇಟ್ಗಳನ್ನು 1 ಲೀ. ನೀರಿಗೆ 1 ಗ್ರಾಂ ನಂತೆ ಸಿಂಪಡಿಸಬೇಕು.
- ಸೊರಗು ರೋಗ ತಾಗುವ ಗಿಡಗಳ ಕೊಂಬೆಗಳು ಒಣಗಬಹುದು. ಅಂತಹ ಕೊಂಬೆಗಳ ಬುಡದಲ್ಲಿ ತೊಗಟೆ ಒಣಗಿರುವುದನ್ನು ನೋಡಬಹುದು. ರೋಗ ಜಾಸ್ತಿಯಾದಾಗ ಗಿಡ ಒಣಗಿ ಸಾಯುತ್ತದೆ. ಈ ರಓಗದ ರೋಗಾಣುಗಳು ಮಣ್ಣಿನಿಂದ ಹಾಗೂ ನೀರಿನ ಮೂಲಕ ಪ್ರಸಾರವಾಗುವುದರಿಂದ, ರೋಗ ಬಂದ ಗಿಡದ ಬುಡದಿಂದ ನೀರನ್ನು ಬೇರೆ ಗಿಡಗಳಿಗೆ ಹಾಯಿಸಬಾರದು ಹಾಗೂ ಸಸಿಗಳನ್ನು ನಾಟಿಗೆ ತರುವಾಗ, ಅವು ರೋಗರಹಿತವೆಂದು ದೃಢೀಕರಿಸಿಕೊಳ್ಳಬೇಕು. ರೋಗ ಬಂದ ಗಿಡಗಳನ್ನು ಬೇರು ಸಹಿತ ಕಿತ್ತು ಸುಟ್ಟುಹಾಕಬೇಕು. ರೋಗ ಬಂದ ಗಿಡಗಳ ಗುಣಿಗಳಿಗೆ ಬೇರೆ ಸಸಿಗಳನ್ನು ನಾಟಿ ಮಾಡುವ ಮೊದಲು ಶೇ. 5ರ 5 ಲೀ. ಫಾರ್ಮಲಿನ್ ಅನ್ನು ಗುಂಡಿಯಲ್ಲಿ ಸುರಿದು ಒಂದು ವಾರದವರೆಗೆ ಪಾಲಿಥೀನ್ ಹಾಳೆಯಿಂದ ಮುಚ್ಚಬೇಕು. ಅನಂತರ ರೋಗ ಇಲ್ಲದ ಕಡೆಯಿಂದ ತಂದ ಮಣ್ಣನ್ನು ತುಂಬಿ ಸಸಿ ನಾಟಿ ಮಾಡಬೇಕು.
ರೋಗ ಮೊದಲ ಹಂತದಲ್ಲಿದ್ದರೆ ಅಂತಹ ಗಿಡಗಳಿಗೆ ಮತ್ತು ಪಕ್ಕದ ಗಿಡಗಳಿಗೆ ಒಂದು ಲೀಟರ್ ನೀರಿನಲ್ಲಿ ಬೆರಸಿ, ಸುಮಾರು 5 ಲೀ. ದ್ರಾವಣವನ್ನು ಪ್ರತಿ ಗಿಡದ ಪಾತಿಯಲ್ಲಿ ಸುರಿಯಬೇಕು. ಮೂರು ದಿನಗಳ ನಂತರ 2 ಗ್ರಾಂ ಮ್ಯಾಂಕೋಜೆಬ್ ಅಥವಾ ಜೈರಮ್ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಮೇಲೆ ಹೇಳಿದ ಪ್ರಮಾಣದಲ್ಲಿ ಸುರಿಯಬೇಕು.