:
ತಳಿಗಳು
1. ಕೂರ್ಗ್ ಹನಿಡ್ಯೂ: ಹಣ್ಣುಗಳು ಉದ್ದವಾಗಿದ್ದು ಸುವಾಸನೆಯಿಂದ ಕೂಡಿವೆ. ಹನಿಡ್ಯೂ ತಳಿಯಿಂದ ಆಯ್ಕೆ ಮಾಡಿ ಅಭಿವೃದ್ಧಿಪಡಿಸಿದ ತಳಿಯಾಗಿದ್ದು ಅಧಿಕ ಇಳುವರಿ ಕೊಡುತ್ತದೆ. ಈ ತಳಿಯಲ್ಲಿ ಹೆಣ್ಣು ಮತ್ತು ಉಭಯ ದ್ವಿ- ಲಿಂಗಕ್ಕೆ ಸೇರಿದ ಎರಡು ತರದ ಹೂಗಳು ಮಾತ್ರ ಇರುತ್ತವೆ.
2. ವಾಷಿಂಗ್ಟನ್: ಗಿಡಗಳೂ ಬಹಳ ಗಡುಸಾಗಿದ್ದು ಕಾಂಡದ ಮೇಲೆ, ಹೆಣ್ಣುಗಳ ಹತ್ತಿರ, ದಟ್ಟ ನೀಲಿ ಬಣ್ಣದ ಉಂಗುರಗಳಿರುತ್ತವೆ. ಹಣ್ಣುಗಳು ದುಂಡಗೆ ಹಾಗೂ ಅಂಡಾಕಾರದಲ್ಲಿದ್ದು ದೊಡ್ಡ ಗಾತ್ರ ಹೊಂದಿರುತ್ತವೆ. ಇದರಲ್ಲಿ ಗಂಡು ಮತ್ತು ಹೆಣ್ಣು ಹೂ ಬಿಡುವ ಪ್ರತ್ಯೇಕ ಗಿಡಗಳಿರುತ್ತವೆ ಪೂರ್ತಿ ಹಣ್ಣಾದಾಗ ಹಣ್ಣುಗಳು ಆಕರ್ಷಕ ಹಳದಿ ಬಣ್ಣ ಪಡೆಯುತ್ತವೆ.
3. ಸೂರ್ಯ: ಸನ್ರೈಸ್ ಸೋಲೊ ಮತ್ತು ಪಿಂಕ್ಪ್ಲೆಷ್ ಸ್ವೀಟ್ ತಳಿಗಳನ್ನು ಸಂಕರಣಗೊಳಿಸಿ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಈ ತಳಿಯಲ್ಲಿ ಹೆಣ್ಣು ಮತ್ತು ಉಭಯ ದ್ವಿಲಿಂಗಕ್ಕೆ ಸೇರಿದ ಎರಡು ತರದ ಹೂವ್ರಗಳು ಮಾತ್ರ ಇವೆ. ಹಣ್ಣು 600-800 ಗ್ರಾಂ ಇದ್ದು ತಿರುಳು ಕೆಂಪಗಿರುತ್ತದೆ. ಸಿಹಿಯಿಂದ ಕೂಡಿದ್ದು ಅತ್ಯಂತ ರುಚಿಕರವಾಗಿರುತ್ತದೆ. ಹಣ್ಣನ್ನು ಕೆಲವ್ರ ದಿನಗಳವರೆಗೆ ಇಡಬಹುದು. ಹಣ್ಣುಗಳು ಅಂಡಾಕಾರದಲ್ಲಿದ್ದು ತಿರುಳು ಕೆಂಪು ಬಣ್ಣದಿಂದ ಕೂಡಿರುತ್ತದೆ.
4. ಸೋಲೊ: ಹಣ್ಣುಗಳ ಗಾತ್ರ ಚಿಕ್ಕದು, ತಿರುಳು ದಟ್ಟ ಕೆಂಪು ಬಣ್ಣದಿಂದ ಕುಡಿದ್ದು ಬಹಳ ರುಚಿಕರವಾಗಿರುತ್ತದೆ. ಕೈತೋಟದಲ್ಲಿ ಬೆಳೆಯಲು ಯೋಗ್ಯವಾಗಿದ್ದು, ಹೆಣ್ಣು ಮತ್ತು ದ್ವಿಲಿಂಗ ಹೂಗಳನ್ನು ಮಾತ್ರ ಉತ್ಪಾದಿಸುತ್ತವೆ.
5. ಕೋ-1 : ಗಿಡಗಳು ಗಿಡ್ಡವಾಗಿದ್ದು ಭೂಮಿಯಿಂದ 1.5 ಮೀ. ಎತ್ತರದೊಳಗೆ ಹಣ್ಣು ಕೊಡುತ್ತವೆ ಹಣ್ಣುಗಳು ಸಾಧಾರಣ ಗಾತ್ರ ಹೊಂದಿದ್ದು ಸಿಹಿಯಾಗಿರುತ್ತವೆ ಇದರಲ್ಲಿ ಕೂಡ ಹೆಣ್ಣು ಮತ್ತು ಗಂಡು ಹೂ ಕೊಡುವ ಗಿಡಗಳು ಬೇರೆ ಬೇರೆಯಾಗಿರುತ್ತವೆ.
6. ಕೋ-2 : ಈ ತಳಿ ಪೆಪೇನ್ ತಯಾರಿಕೆಗೆ ಬಹಳ ಸೂಕ್ತವಾಗಿದೆ.