:
ತಳಿಗಳು ದಕ್ಷಿಣ ಒಳವಲಯಕ್ಕೆ
1) ವಾಣಿಜ್ಯ ತಳಿಗಳು
· ಆಲ್ಫಾನ್ಸೋ (ಬಾದಾಮಿ): ದೇಶ ವಿದೇಶಗಳಲ್ಲಿ ಹೆಚ್ಚು ಜನಪ್ರೀಯವಾದ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ತಳಿ. ಹಣ್ಣುಗಳು ಆಕರ್ಷಕ ಹಳದಿ ಬಣ್ಣದಿಂದ ಕೂಡಿದ್ದು ಭುಜಗಳ ಮೆಲೆ ಕೆಂಪು ವರ್ಣವನ್ನು ಕಾಣಬಹುದು. ಹಣ್ಣಿನ ಗುಣಮಟ್ಟ ಉತ್ಕೃಷ್ಟ (ಸಕ್ಕರೆ ಅಂಶ 170 ಬ್ರಿಕ್ಸ್) ಮತ್ತು ತಿರುಳು ಗಟ್ಟಿಯಾಗಿದ್ದು ನಾರಿನಿಂದ ಮುಕ್ತವಾಗಿದೆ. ಇಳುವರಿ ಸಾಧಾರಣ ಮತ್ತು ಎರಡು ವರ್ಷಕ್ಕೊಮ್ಮೆ ಅಧಿಕ ಇಳುವರಿ ಕೊಡುವ ತಳಿ. ಈ ತಳಿಯ ಹಣ್ಣುಗಳು "ಸ್ಪಂಜು ಅಂಗಾಂಶ' ಎಂಬ ಶಾರೀರಕ ತೊಂದರೆಗೆ ಹೆಚ್ಚು ತುತ್ತಾಗುತ್ತವೆ.
· ಐಶ್ವರ್ಯ: ತೋಟಗಾರಿಕೆ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಿಂದ ಬಿಡುಗಡೆ ಮಾಡಿದ ಸುಧಾರಿತ ತಳಿಯಿದು. ಅಧಿಕ ಇಳುವರಿ ಕೊಡುವ ತಳಿ(10.06 ಟನ್/ಹೆ.) ಹಣ್ಣುಗಳ ಗಾತ್ರ ಸಾಧಾರಣ (228.10 ಗ್ರಾಂ), ನೋಡಲು ಆಕರ್ಷಕ ಅಧಿಕ ರುಚಿ (ಸಕ್ಕರೆ ಅಂಶ 18.070 ಬ್ರಿಕ್ಸ್) ಮತ್ತು ಹಣ್ಣಿನ ಶೇ 75.4 ಭಾಗವ್ರ ತಿರುಳಿನಿಂದ ಕೂಡಿದೆ. ಈ ತಳಿಯ ಹಣ್ಣುಗಳು ಸ್ಪಂಜು ಅಂಗಾಂಶವೆಂಬ ಶಾರೀರಿಕ ತೊಂದರೆಯಿಂದ ಮುಕ್ತವಾಗಿರುತ್ತವೆ.
· ಪೈರಿ (ರಸಪುರಿ): ಇದು ಬೇಗ ಮಾಗುವ ತಳಿಯಾಗಿದ್ದು, ಮಧ್ಯಮ ಗಾತ್ರದ (220 ಗ್ರಾಂ) ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳು ರುಚಿಕರವಾದ, ನಾರುರಹಿತ ತಿರುಳಿನಿಂದ ಕೂಡಿವೆ.
· ತೋತಾಪುರಿ (ಬೆಂಗಳೂರ): ಇದು ಪ್ರತಿ ವರ್ಷವೂ ಮತ್ತು ತಡವಾಗಿ ಫಸಲು ಕೊಡುವ ತಳಿಗಯಾಗಿದ್ದು, ದೊಡ್ಡ ಗಾತ್ರದ (440 ಗ್ರಾಂ) ಹಣ್ಣು ಕೊಡುತ್ತದೆ. ಆದರೆ ಹಣ್ಣಿನ ರುಚಿ ಇತರ ತಳಿಗಳಷ್ಟು ಉತ್ತಮವಾಗಿಲ್ಲ. ಹಣ್ಣನ್ನು ಹೆಚ್ಚು ಕಾಲ ಕೆಡದಂತೆ ಇಡಬಹುದು. ಒಣ ಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯಬಹುದು. ಸಂಸ್ಕರಣೆಗಾಗಿ ಹೆಚ್ಚಾಗಿ ಬಳಸಲ್ಪಡುತ್ತದೆ.
· ಮಲಗೋವ: ಕಡಿಮೆ ಸಂಖ್ಯೆಯ ಹಣ್ಣು ಕೊಡುವ ತಳಿಯಾಗಿದ್ದು, ದೊಡ್ಡ ಗಾತ್ರದ (450 ಗ್ರಾಂ) ಉತ್ತಮ ಗುಣಮಟ್ಟದ ರುಚಿಕರವಾದ ಹಣ್ಣುಗಳನ್ನು ಕೊಡುತ್ತದೆ.
· ನೀಲಂ: ಇದು ತಡವಾಗಿ ಬರುವ ತಳಿಯಾದರೂ ಪ್ರತಿ ವರ್ಷ ನಿಯಮಿತವಾಗಿ ಇಳುವರಿ ಕೊಡುತ್ತದೆ. ತಡವಾಗಿ ಮಾಗುವ ತಳಿಯಾದುದರಿಂದ ಓಟೆಕೊರಕ ಕೀಟದ ಬಾಧೆಗೆ ತುತ್ತಾಗುತ್ತದೆ. ಒಣ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ.
· ಬೆನೆಶಾನ್ (ಬಂಗನಪಲ್ಲಿ) : ಒಣ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತ ತಳಿಯಾಗಿದ್ದು, ಹಣ್ಣಿನ ಗಾತ್ರ ದೊಡ್ಡದು (400 ಗ್ರಾಂ) ಮತ್ತು ಗುಣಮಟ್ಟ ಉತ್ತಮವಾಗಿದೆ. ಈ ತಳಿಯ ಹಣ್ಣುಗಳಿಗೆ ರಫ್ತು ಬೇಡಿಕೆಯೂ ಸಹ ಇದೆ.
· ದಶೇರಿ : ಈ ತಳಿ ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಹಣ್ಣಿನ ತಿರುಳು ನಾರಿನಿಂದ ಮುಕ್ತವಾಗಿದ್ದು ರುಚಿಕರವಾಗಿದೆಯಲ್ಲದೆ ಸುವಾಸನೆಯಿಂದ ಕೂಡಿದೆ. ಹಣ್ಣು ದೀರ್ಘ ಕಾಲದ ಶೇಖರಣೆ ಗುಣ ಹೊಂದಿದೆ.
· ಕೇಸರ್: ಮಹಾರಾಷ್ೖ ಮತ್ತು ಗುಜರಾತ್ ರಾಜ್ಯಗಳ ವಾಣಿಜ್ಯ ತಳಿಯಾದ ಈ ತಳಿಯನ್ನು ಕರ್ನಾಟಕದಾದ್ಯಂತ ಸಮೃದ್ಧಿಯಾಗಿ ಬೆಳೆಯಬಹುದು. ಹಣ್ಣು ಆಕರ್ಷಕವಾಗಿದ್ದು ಎರಡೂ ಭುಜಗಳು ಒಂದೇ ಸಮನಾಗಿದ್ದು ಮಾಗಿದ ಹಣ್ಣುಗಳು ಹೊಳೆಯುವ ಹಳದಿಬಣ್ಣದಿಂದ ನಿಯಮಿತವಾದ ಇಳುವರಿಯನ್ನು ನಿರೀಕ್ಷಿಸಬಹುದು. ಹಣ್ಣಿನ ಗುಣಮಟ್ಟ ಅಧಿಕ ಮತ್ತು ಮಾರುಕಟ್ಟೆಯಲ್ಲಿ ಈ ತಳಿಗೆ ಬೇಡಿಕೆ ಹೆಚ್ಚು.
2) ಸಂಕರಣ ತಳಿಗಳು
· ಮಲ್ಲಿಕ: ನೀಲಂ ಮತ್ತು ದಶೇರಿ ತಳಿಗಳಿಂದ ಸಂಕರಣಗೊಂಡ ಈ ತಳಿಯನ್ನು ನವದೆಹಲಿಯಿಂದ ಬಿಡುಗಡೆ ಮಾಡಲಾಗಿದೆ. ಈ ತಳಿಯ ಮರಗಳು ಸಾಧಾರಣ ಗಾತ್ರದಿಂದಿದ್ದು, ಪ್ರತಿ ವರ್ಷವೂ ನಿಯಮಿತವಾಗಿ ಹೆಚ್ಚು ಇಳುವರಿಯನ್ನು ಕೊಡುತ್ತದೆ. ಹಣ್ಣಿನ ಗಾತ್ರ ದೊಡ್ಡದು (400-600 ಗ್ರಾಂ) ಸಿಪ್ಪೆ ತೊಗಲಿನಂತಿದ್ದು ಓಟೆ ತೆಳ್ಳದಾಗಿರುತ್ತದೆ. ತಿರುಳು ಗಟ್ಟಿ, ರಸಭರಿತ ಮತ್ತು ಹೆಚ್ಚು ಸಿಹಿ (ಟಿ.ಎಸ್.ಎಸ್.೨೫೦ ಬ್ರಿಕ್ಸ್) ದೀರ್ಘಾವಧಿ ತಳಿ. ಜೂನ್- ಜುಲೈ ತಿಂಗಳುಗಳಲ್ಲಿ ಹಣ್ಣುಗಳು ಲಭ್ಯ.
· ಅಮ್ರಪಾಲಿ: ಇದು ಸಾಧಾರಣದಿಂದ ಉತ್ತಮ ಇಳುವರಿ ಕೊಡುವ ಸಂಕರಣ ತಳಿ (ದಶೇರಿ x ನೀಲಂ). ಉತ್ತಮ ಹಣ್ಣು ಪಡೆಯಬಹುದು. ಕಡಿಮೆ ಅಂತರದಲ್ಲಿ ಬೆಳೆಯಲು, ಸೂಕ್ತವಾದ ತಳಿ. ಕಡು ಕಿತ್ತಳೆ ಬಣ್ಣದ ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ.
· ಅರ್ಕಾ ಅನ್ಮೋಲ್: ನಿಯಮಿತವಾಗಿ ಹೆಚ್ಚಿನ ಇಳುವರಿ ಕೊಡುವ ಸಂಕರಣ ಅಧಿಕ ಸಾಂದ್ರತೆ ನೆಡುವಿಕೆಗೆ (ಬಾದಾಮಿ x ಜನಾರ್ಧನ ಪಸಂದ್) ತಳಿಯಾಗಿದ್ದು, ಹಣ್ಣಿನ ಬಣ್ಣ ಆಕರ್ಷಕವಾಗಿದ್ದು, ಹೆಚ್ಚು ಕಾಲ ಕೆಡದಂತೆ ಇಡಬಹುದು. ಸಂಸ್ಕರಣೆಗೆ ಸೂಕ್ತ.
· ಅರ್ಕಾನೀಲಕಿರಣ್: ಹಣ್ಣಿನ ಬಣ್ಣ ಅಕರ್ಷಕವಾಗಿದ್ದು ಹೆಚ್ಚು ಕಾಲ ಕೆಡುವ್ರದಿಲ್ಲ ಮತ್ತು ಹೆಚ್ಚಿನ ಇಳುವರಿ ಕೊಡಬಲ್ಲದು. ಇದು ಉತ್ತಮ ಇಳುವರಿ ಕೊಡುವ ಸಂಕರಣ ತಳಿ (ಅಲ್ಫಾನ್ಸೊ x ನೀಲಂ). ಹಣ್ಣು ಮಧ್ಯಮದಿಂದ ದೊಡ್ಡ ಗಾತ್ರ ಹೊಂದಿ, ತಿರುಳು ನಾರುರಹಿತವಾಗಿದ್ದು, ಗಟ್ಟಿಯಾಗಿದೆ. ಮಧ್ಯಮ ಗಾತ್ರದ ಓಟೆ ಹೊಂದಿದ್ದು, ಹಣ್ಣನ್ನು ಕೆಲದಿನಗಳವರೆಗೆ ಕೆಡದಂತಿಡಬಹುದು. ಒಣ ಪ್ರದೇಶಗಳಿಗೆ ಯೋಗ್ಯ ತಳಿ.
· ನೀಲಗೋವಾ: ಹೆಚ್ಚು ಕಾಲ ಕೆಡುವ್ರದಿಲ್ಲ ಮತ್ತು ಹೆಚ್ಚಿನ ಇಳುವರಿ ಕೊಡಬಲ್ಲದು. ಇದು ಉತ್ತಮ ಇಳುವರಿ ಕೊಡುವ ಸಂಕರಣ ತಳಿ (ನೀಲಂ ಎರ್ರಮಲಗೋವ) ಹಣ್ಣು ಮಧ್ಯಮದಿಂದ ದೊಡ್ಡ ಗಾತ್ರ ಹೊಂದಿದ್ದು, ತಿರಳು ನಾರುರಹಿತವಾಗಿ ಗಟ್ಟಿಯಾಗಿದೆ. ಮಧ್ಯಮ ಗಾತ್ರದ ಒಟೆ ಹೊಂದಿದ್ದು ಹಣ್ಣನ್ನು ಕೆಲದಿನಗಳವರೆಗೆ ಕೆಡದಂತಿಡಬಹುದು. ಒಣ ಪ್ರದೇಶಗಳಿಗೆ ಯೋಗ್ಯ ತಳಿ.
· ನೀಲೇಶಾನ್: ನೀಲಂ ಮತ್ತು ಬೆನೆಶಾನ್ (ಬಂಗನಪಲ್ಲಿ) ತಳಿಗಳ ಸಂಕರಣದಿಂದ ಉತ್ಪತ್ತಿ ಮಾಡಿದ ಹೈಬ್ರಿಡ್ ತಳಿ, ಅಧಿಕ ಇಳುವರಿ ಕೊಡುವ ತಳಿ ಮತ್ತು ಪ್ರತಿ ವರ್ಷವೂ ಇಳುವರಿಯನ್ನು ಕೊಡುತ್ತದೆ. ಹಣ್ಣುಗಳ ಗಾತ್ರ ಸಾಧಾರಣದಿಂದ ದೊಡ್ಡದು ಮತ್ತು ಗೊಂಚಲು ಗೊಂಚಲಾಗಿ ಬಿಡುತ್ತದೆ.
· ರತ್ನ: ಇದು ಸಂಕರಣ ತಳಿ (ನೀಲಂ ಅಲ್ಫಾನ್ಸೊ). ಹಣ್ಣಿನ ಗಾತ್ರ ಮಧ್ಯಮವಾಗಿದ್ದು ರುಚಿ ಬಹಳಷ್ಟು ಚೆನ್ನಾಗಿರುತ್ತದೆ. ಇದು ಕರಾವಳಿ ಪ್ರದೇಶಕ್ಕೆ ಸೂಕ್ತವೆಂದು ಕಂಡುಬಂದಿದೆ.
ಗುಡ್ಡಗಾಡು ಪ್ರದೇಶಗಳಿಗೆ
1. ಬಾದಾಮಿ 2. ರಸಪುರಿ 3. ಮಲಗೋವ ಮತ್ತು 4. ಮುಂಡಪ್ಪ: ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ತಳಿ, ಹಣ್ಣಿನ ಗಾತ್ರ ದೊಡ್ಡದಾಗಿದ್ದು, ಚಿಕ್ಕ ಓಟೆ ಮತ್ತು ಉತ್ತಮ ಗುಣ ಹೊಂದಿರುತ್ತದೆ.
ಕರಾವಳಿ ಪ್ರದೇಶಗಳಿಗೆ
1. ಬಾದಾಮಿ 2. ನೀಲಂ. 3. ರಸಪುರಿ 4. ಮುಂಡಪ್ಪ: ಇವ್ರಗಳ ವಿವರಣೆ ಮೇಲೆ ನೀಡಲಾಗಿದೆ.
5. ಬೆನೆಟ್-ಅಲ್ಫಾನ್ಸೊ: ಕರಾವಳಿಯ ಜನಪ್ರಿಯ ತಳಿ. ಹಣ್ಣುಗಳು ಸಿಹಿಯಾಗಿದ್ದು ಮಧ್ಯಮ ಗಾತ್ರ ಹೊಂದಿವೆ.
6. ಕಲಪಾಡಿ: ಗಿಡ್ಡವಾದ ತಳಿ, ಹಣ್ಣುಗಳು ಚಿಕ್ಕದಾಗಿದ್ದು ಮೂತಿ ಎದ್ದು ಕಾಣಿಸುವಂತಿರುತ್ತದೆ. ತಿರುಳು ಹೆಚ್ಚು ಸಿಹಿಯಾಗಿರುತ್ತದೆ.
7. ಕರಿ-ಇಷಾಡ್: ಉತ್ತರ ಕನ್ನಡದ ಜನಪ್ರಿಯ ತಳಿ, ದಪ್ಪನಾದ ಹಣ್ಣುಗಳನ್ನು ಕೊಡುತ್ತದೆ. ಆದರೆ ಹಣ್ಣುಗಳನ್ನು ಹೆಚ್ಚು ದಿನ ಇಡಲಾಗುವ್ರದಿಲ್ಲ.