:
ತಳಿಗಳು
ದ್ರಾಕ್ಷಿಯಲ್ಲಿ ಅನೇಕ ತಳಿಗಳಿದ್ದು, ಈ ಕೆಳಗಿನವ್ರ ಜನಪ್ರಿಯವಾಗಿವೆ
1. ಬೆಂಗಳೂರು ಬ್ಲೂ: ಈ ತಳಿಯ ಹಣ್ಣುಗಳು ಕಪ್ಪು ಮಿಶ್ರಿತ ನೀಲಿ ಬಣ್ಣ ಹೊಂದಿದ್ದು ಗುಂಡಗಿರುತ್ತವೆ. ಇದರ ರುಚಿ ಸ್ವಲ್ಪ ಹುಳಿ. ಇದರ ರಸ ಕಂದು ಬಣ್ಣದಿಂದ ಕೂಡಿದ್ದು ಬಹುಕಾಲ ಶೇಖರಿಸಿಡಬಹುದು. ಇದರ ಗೊಂಚಲುಗಳು ಸಾಧಾರಣ ಗಾತ್ರವಾಗಿದ್ದು ಹಣ್ಣುಗಳು ಒತ್ತಾಗಿರುತ್ತವೆ. ವರ್ಷದಲ್ಲಿ ಎರಡು ಬೆಳೆಗಳನ್ನು ಯಶಸ್ವಿಯಾಗಿ ಪಡೆಯಬಹುದು. ಈ ತಳಿಗೆ ಬೆಳೆಯನ್ನು ಬಾಧಿಸುವ ಹಲವಾರು ರೋಗಗಳನ್ನು ಸಹಿಸಿಕೊಳ್ಳುವ ಶಕ್ತಿ ಇದೆ.
2. ಅನಾಬ್-ಇ-ಷಾಹಿ : ಈ ತಳಿಯ ಹಣ್ಣುಗಳು ಅಂಡಾಕಾರದಲ್ಲಿರುತ್ತವೆ. ಹಣ್ಣುಗಳೂ ತಿಳಿ ಹಳದಿಯಿಂದ ಕೂಡಿರುತ್ತವೆ. ಇವ್ರ ಸಿಹಿಯಾಗಿರುವ್ರದೇ ಅಲ್ಲದೆ ಮಾರುಕಟ್ಟೆಗೆ ಉತ್ತಮವೆನ್ನಿಸಿವೆ. ಅತಿ ಹೆಚ್ಚು ಇಳುವರಿ ಕೊಡಬಲ್ಲದು. ಗೊಂಚಲುಗಳೂ ದೊಡ್ಡವಾಗಿದ್ದು ಹಣ್ಣುಗಳೂ ಒತ್ತಾಗಿರುತ್ತವೆ.
3. ದಿಲ್ಕುಷ್: ಇದನ್ನು ಅನಾಬ್-ಇ-ಷಾಹಿ ತಳಿಯಿಂದ ಆಯ್ಕೆ ಮಾಡಲಾಗಿದೆ. ಈ ತಳಿಯ ಹಣ್ಣುಗಳು ಬಹಳ ಉದ್ದವಾಗಿದ್ದು, ಅತಿ ಆಕರ್ಷಣೆಯಿಂದ ಕೂಡಿರುತ್ತವೆ ಹಾಗೂ ಅಧಿಕ ಇಳುವರಿ ಕೊಡಬಲ್ಲದು.
4. ಥಾಮ್ಸನ್ ಸೀಡ್ಲೆಸ್ ಇದು ಸಣ್ಣದಾದ, ಗುಂಡನೆಯ ಹಳದಿ ಮಿಶ್ರಿತ ಬಿಳಿ ಬಣ್ಣದ ಹಣ್ಣುಗಳುಳ್ಳ ತಳಿ. ಹಣ್ಣುಗಳಲ್ಲಿ ಬೀಜ ಇರುವ್ರದಿಲ್ಲ. ತಿನ್ನಲು ಬಹಳ ಅತ್ಯುತ್ತಮವಾದ ತಳಿ. ಗೊಂಚಲುಗಳು ಸಾಧಾರಣ ಗಾತ್ರವಿದ್ದು ಹಣ್ಣುಗಳು ಬಹಳ ಒತ್ತಾಗಿರುತ್ತವೆ. ಇತರ ತಳಿಗಳಷ್ಟು ಹೆಚ್ಚು ಇಳುವರಿ ಕೊಡಲಾರದು. ಇದರ ಹಣ್ಣುಗಳು ಒಣ ದ್ರಾಕ್ಷಿ ಮಾಡುವ್ರದಕ್ಕೂ ಅತ್ಯುತ್ತಮ.
5. ಸೊನಾಕಾ: ಇದು ಥಾಮ್ಸನ್ ಸೀಡ್ಲೆಸ್ ತಳಿಯಿಂದ ಅಭಿವೃದ್ಧಿಪಡಿಸಿದ ಬೀಜರಹಿತ ತಳಿಯಾಗಿದ್ದು ಅಧಿಕ ಇಳುವರಿ ಕೊಡಬಲ್ಲದು. ಈ ತಳಿಯ ಹಣ್ಣುಗಳು ಉದ್ದವಾಗಿದ್ದು, ಜಿಬ್ಬರ್ಲಿಕ್ ಆಮ್ಲದ ಸಿಂಪಡಿಕೆಯಿಂದ ಉತ್ತಮ ಗುಣಮಟ್ಟವನ್ನು ಹೊಂದಬಲ್ಲವ್ರ.
6. ಶರದ್ ಸೀಡ್ಲೆಸ್: ಕಡುನೀಲಿ ಬಣ್ಣ ಹೊಂದಿದ, ಬೀಜರಹಿತ ತಳಿ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಕೊಡಬಲ್ಲದಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿದೆ.
7. ಫ್ಲೇಮ್ಸೀಡ್ಲೆಸ್: ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಭಿವೃದ್ಧಿ ಪಡಿಸಿದ ತಳಿ. ಇದು ಮಧ್ಯಮ ಗಾತ್ರದ ಗೊಂಚಲುಗಳನ್ನು ಹೊಂದಿದ್ದು, ಕೆಂಪು ಬಣ್ಣದ, ಅತ್ಯಾಕರ್ಷಕ ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳು ದುಂಡಾಕಾರದಲ್ಲಿದ್ದು ತಿರುಳು ಗಟ್ಟಿಯಾಗಿರುತ್ತದೆ. ಈ ತಳಿ ಬೇರೆ ಎಲ್ಲ ತಳಿಗಳಿಗಿಂತ ಬೇಗ ಮಾಗುವ್ರದು.
8. ಗುಲಾಬಿ: ಕಂದು ಬಣ್ಣದ ದುಂಡನೆಯ ಹಣ್ಣುಗಳನ್ನು ಬಿಡುತ್ತದೆ. ಹಣ್ಣಿನ ಸಿಪ್ಪೆ ದಪ್ಪ. ಹಣ್ಣು ಸಿಹಿಯಾಗಿರುವ್ರದೇ ಅಲ್ಲದೆ ಒಂದು ವಿಧವಾದ ಗುಲಾಬಿ ಹೂವಿನ ವಾಸನೆ ಇರುತ್ತದೆ. ಸಮಾನ್ಯ ಗಾತ್ರವ್ರಳ್ಳ ಗೊಂಚಲುಗಳನ್ನು ಹೊಂದಿರುತ್ತದೆ. ಗೊಂಚಲುಗಳಲ್ಲಿ ಹಣ್ಣುಗಳು ವಿರಳವಾಗಿರುತ್ತವೆ. ಇದು ಅಲ್ಪಾವಧಿಯಲ್ಲಿ ಕೊಯ್ಲಿಗೆ ಬರುವ ತಳಿ. ಉತ್ತಮ ಇಳುವರಿ ಕೊಡಬಲ್ಲದು, ವರ್ಷದಲ್ಲಿ ಎರಡು ಬೆಳೆಗಳನ್ನು ತೆಗೆಯಬಹುದು. ಈ ತಳಿಯಲ್ಲಿ ಗೊಂಚಲಿನಲ್ಲಿರುವ ಎಲ್ಲಾ ಕಾಯಿಗಳು ಒಟ್ಟಿಗೆ ಮಾಗುವ್ರದಿಲ್ಲ.
9. ಬ್ಲಾಕ್ ಚಂಪ: ಇದು ಇತೀಚಿಗೆ ಬೆಂಗಳೂರಿನ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಬಳಕೆಗೆ ಬರುತ್ತಿರುವ ಹೊಸ ತಳಿ. ಇದರ ಹಣ್ಣುಗಳು ಸಣ್ಣದಾಗಿರುವ್ರದೇ ಅಲ್ಲದೆ ಕಪ್ಪು ಮಿಶ್ರಿತ ನೀಲಿ ಬಣ್ಣದಿಂದ ಕೂಡಿರುತ್ತವೆ. ಇದೂ ಸಹ ಹೆಚ್ಚು ಇಳುವರಿ ಕೊಡಬಲ್ಲದು.