ಕಡಲೆ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಕಳೆಗಳು ಹೆಚ್ಚಾಗಿ ಕಂಡು ಬರುತ್ತವೆ. ಕಳೆ ನಿಯಂತ್ರಿಸಲು ಫ್ಲೂಕ್ಲೋರಾಲಿನ್ 1 ಕೆಜಿ ಎ.ಐ. ಪ್ರತಿ ಹೆಕ್ಟೇರಿಗೆ ಅಥವಾ ಪೆಂಡಿಮಿಥಲಿನ್ 1.0 ದಿಂದ 1.5 ಕೆಜಿ ಎ>ಐ. ಪ್ರತಿ ಹೆಕ್ಟೇರಿಗೆ ಬೀಜ ಮೊಳಕೆಗೆ ಮುಂಚೆ ಸಿಂಪಡಿಸಬೇಕು. ಸಾಲುಗಳ ನಡುವೆ ಹೆಚ್ಚು ಅಂತರವಿದ್ದರೆ, ಎಡೆಕುಂಟೆಗಳಿಂದ ಅಥವಾ ಕೈಯಿಂದ ಕಳೆಯನ್ನು ತೆಗೆಯಬಹುದು.
ಕಡಲೆಯು ಖುಷ್ಕಿ ಬೆಳೆಯಾಗಿದ್ದು, ಎರಡು ಬಾರಿ ನೀರು ಹಾಯಿಸುವದರಿಂದ (ಕೊಂಬೆಗಳು ಬೆಳೆಯುವ ಸಮಯದಲ್ಲಿ, ಮತ್ತು ಕಾಯಿ ತುಂಬಿಕೊಳ್ಳುವ ಹಂತದಲ್ಲಿ) ಹೆಚ್ಚಿನ ಇಳುವರಿ ಬರುತ್ತದೆ. ಜೇಡಿ ಮಣ್ಣಿನಲ್ಲಿ ಹೆಚ್ಚಾಗಿ ನೀರನ್ನು ಹಾಯಿಸುವ್ರದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ ಶಾರೀರಿಕ ಬೆಳವಣಿಗೆ ಹೆಚ್ಚಾಗಿ, ಫಲನೀಡುವದು ಕಡಿಮೆಯಾಗಿ, ಇಳುವರಿ ಕಡಿಮೆ ಬರುತ್ತದೆ.
ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯುವಲ್ಲಿ ಉತ್ತಮ ಗುಣಮಟ್ಟವ್ರಳ್ಳ ಶುದ್ಧವಾದ ಹೆಚ್ಚಿನ ಇಳುವರಿ ಕೊಡುವಂತಹ ತಳಿಗಳ ಪಾತ್ರ ಅತೀ ಪ್ರಮುಖವಾದದ್ದು. ದ್ವಿದಳ ಧಾನ್ಯಗಳಲ್ಲಿ ಉತ್ತಮ ತಳಿಗಳ ಬೀಜಗಳು ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ದೊರಕದ ಕಾರಣ ರೈತರು ಉತ್ತಮ ತಳಿಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿಲ್ಲವೆಂದು ತಿಳಿದು ಬಂದಿದೆ.
ಕಡಲೆ ಸಸಿಗಳು ಹೈಪೊಜಿಯಲ್ ಉದಯಿಸುವ್ರಕೆಯನ್ನು ಹೊಂದಿವೆ. ಅಂದರೆ ಅದರ ಬೀಜ ಪಳಕಗಳು ಭೂಮಿಯ ಒಳಗೆ ಇದ್ದು, ಶೀಘ್ರವಾಗಿ ಬೆಳೆಯುವ ಬೇರು ಮತ್ತು ಚಿಗುರುಗಳಿಗೆ ಶಕ್ತಿಯನ್ನು ಒದಗಿಡುತ್ತವೆ. ಬಿತ್ತನೆ ಮಾಡಿದ 7-15 ದಿವಸಗಳಲ್ಲಿ ಮೊಳಕೆಯನ್ನು ಕಾಣಬಹುದು. ಇದು ಮಣ್ಣಿನ ಉಷ್ಣತೆ ಮತ್ತು ಬಿತ್ತನೆ ಆಳವನ್ನು ಅವಲಂಬಿಸಿದೆ.